HomeKarnatakaBREAKING NEWS: ರಾಜ್ಯದ ಇತಿಹಾಸದಲ್ಲಿಯೇ ಅತಿ ದೊಡ್ಡ ಡ್ರಗ್ಸ್ ಬೇಟೆ: 74 ಕೋಟಿ ಮೌಲ್ಯದ MDMA...

BREAKING NEWS: ರಾಜ್ಯದ ಇತಿಹಾಸದಲ್ಲಿಯೇ ಅತಿ ದೊಡ್ಡ ಡ್ರಗ್ಸ್ ಬೇಟೆ: 74 ಕೋಟಿ ಮೌಲ್ಯದ MDMA ಮಾದಕ ವಸ್ತು ಜಪ್ತಿ

ಮಂಗಳೂರು: ಮಂಗಳುರು ಸಿಸಿಬಿ ಪೊಲೀಸರು ರಾಜ್ಯದ ಇತಿಹಾಸದಲ್ಲಿಯೇ ಅತಿ ದೊಡ್ಡ ಡ್ರಗ್ಸ್ ಬೇಟೆ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 74 ಕೋಟಿ ರೂ ಮೌಲ್ಯದ ಮಾದಕವಸ್ತು ಜಪ್ತಿ ಮಾಡಿದ್ದಾರೆ.

ಕಳೆದ 5 ತಿಂಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಡ್ರಗ್ಸ್ ಮಾರುತ್ತಿದ್ದ ಇಬ್ಬರು ವಿದೇಶಿ  ಪ್ರಜೆಗಳನ್ನು ಬಂಧಿಸಲಾಗಿದೆ. ದೆಹಲಿಯ ಲ್ಯಾಬ್ ನಲ್ಲಿ ಎಂಡಿಎಂ ತಯಾರಿಸಲಾಗುತ್ತಿತ್ತು. ಅವುಗಳನ್ನು ವಾರಕ್ಕೊಮ್ಮೆ ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧೆಡೆ ಸಾಗಾಟ ಮಾಡಲಾಗುತ್ತಿತ್ತು.

ದೆಹಲಿ ಏರ್ ಪೋರ್ಟ್ ನಲ್ಲಿಯೇ ಡ್ರಗ್ಸ್ ಮಾಫಿಯಾಗೆ ಅಧಿಕಾರಿಗೇ ಸಾಥ್ ನೀಡುತ್ತಿರುವುದು ಬಯಲಾಗಿದೆ. ಅಲ್ಲದೇ ದೆಹಲಿ ಫ್ಲೈಟ್ ಮೂಲಕ ಬೆಂಗಳೂರಿಗೆ ಮೂಟೆಗಟ್ಟಲೇ  ಎಂಡಿಎಂಎ ಮಾತ್ರೆಗಳು ಬರುತ್ತಿದ್ದವು ಎಂಬುದು ಈ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ. ಏರ್ ಪೋರ್ಟ್ ಮಾಫಿಯಾವನ್ನು ಮಂಗಳೂರು ಪೊಲೀಸರು ಬಹಿರಂಗಗೊಳಿಸಿದ್ದಾರೆ. ಮಂಗಳೂರು ಕಮಿಷ್ನರ್ ಅನುಪಮ್ ಅಗರ್ವಾಲ್, ಸಿಸಿಬಿ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular