HomeKarnatakaBIG NEWS: ನಿಂತಿದ್ದ KSRTC ಬಸ್ ಗೆ ಕಾರು ಡಿಕ್ಕಿ ಪ್ರಕರಣ; ನಾಲ್ವರು ಟೆಕ್ಕಿಗಳು ದುರ್ಮರಣ

BIG NEWS: ನಿಂತಿದ್ದ KSRTC ಬಸ್ ಗೆ ಕಾರು ಡಿಕ್ಕಿ ಪ್ರಕರಣ; ನಾಲ್ವರು ಟೆಕ್ಕಿಗಳು ದುರ್ಮರಣ

ಮಂಡ್ಯ: ಮಂಡ್ಯ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರು ಮೂಲದ ನಾಲ್ವರು ಸಾಫ್ಟ್ ವೇರ್ ಇಂಜಿನಿಯರ್ ಗಳು ಸಾವನ್ನಪ್ಪಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಬಳಿ ನಿಂತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸಾಫ್ಟ್ ವೇರ್ ಇಂಜಿನಿಯರ್ ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಕ್ಸೆಂಚರ್ ಕಂಪನಿಯ ನಮಿತಾ, ರಘುನಾಥ್ ಭಜಂತ್ರಿ, ಇನ್ಫೊಸಿಸ್ ಕಂಪನಿಯ ಪಂಕಜ್ ಶರ್ಮಾ ಹಾಗೂ ವಂಶಿ ಕೃಷ್ಣ ಮೃತರು. ಮೃತರೆಲ್ಲರೂ ಬೆಂಗಳೂರು ಮೂಲದವರಾಗಿದ್ದಾರೆ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular