HomeKarnatakaBREAKING NEWS: ಸ್ನೇಹಿತರೊಂದಿಗೆ ಈಜಲು ಹೋಗಿ ನೀರುಪಾಲಾದ ಬಿಇ ವಿದ್ಯಾರ್ಥಿ

BREAKING NEWS: ಸ್ನೇಹಿತರೊಂದಿಗೆ ಈಜಲು ಹೋಗಿ ನೀರುಪಾಲಾದ ಬಿಇ ವಿದ್ಯಾರ್ಥಿ

ಮಂಡ್ಯ: ಸ್ನೇಹಿತರೊಂದಿಗೆ ಈಜಲು ಹೋಗಿ ನಾಲೆಯಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿ ನೀರುಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಯಲಿಯೂರು ಬಳಿಯ ವಿಸಿ ನಾಲೆಯಲ್ಲಿ ನಡೆದಿದೆ.

22 ವರ್ಷದ ಯಶ್ವಂತ್ ನೀರು ಪಾಲಾಗಿರುವ ವಿದ್ಯಾರ್ಥಿ. ಮದ್ದೂರು ತಾಲೂಕಿನ ಸೋಮನಹಳ್ಳಿ ನಿವಾಸಿ ಅನಿಲ್ ಕುಮಾರ್ ಹಾಗೂ ಉಮಾ ದಂಪತಿಯ ಪುತ್ರ. ಕಾವೇರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವಿದ್ಯಾರ್ಥಿಯಾಗಿದ್ದ ಯಶ್ವಂತ್, ಮಧ್ಯಾಹ್ನ ಸ್ನೇಹಿತರೊಂದಿಗೆ ವಿಸಿ ನಾಲೆಗೆ ಈಜಲು ತೆರಳಿದ್ದ. ಈಜು ಬಾರದಿದ್ದರೂ ನಾಲೆಗೆ ಇಳಿದಿದ್ದ.

ನಾಲೆಯ ನೀರಿನ ರಭಸಕ್ಕೆ ಮೂವರು ಕೊಚ್ಚಿ ಹೋಗುತ್ತಿದ್ದರು. ಈ ವೇಳೆ ಸ್ಥಳೀಯರು ಇಬ್ಬರು ಯುವಕರನ್ನು ರಕ್ಷಿಸಿದ್ದಾರೆ. ಯಶ್ವಂತ್ ನೀರಿನಲ್ಲಿ ಕೊಚ್ಚಿ ಹೋಗಿ ನೀರು ಪಾಲಾಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ವಿಸಿ ನಾಲೆಯಲ್ಲಿ ಯಶ್ವಂತ್ ಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಡ್ಯ ಗ್ರಾಮಾಂತರ ಪೊಲಿಸ್ ಠಾನೆ ವ್ಯಾಪ್ತಿಯಲ್ಲಿ ಘಟಣೆ ನಡೆದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular