HomeKarnatakaBREAKING NEWS: ಪತ್ನಿ ಜೊತೆ ಅಕ್ರಮ ಸಂಬಂಧ ಅನುಮಾನ: ಯುವಕನನ್ನು ಗುಂಡಿಟ್ಟು ಕೊಲ್ಲಲು ಯತ್ನಿಸಿದ ವ್ಯಕ್ತಿ

BREAKING NEWS: ಪತ್ನಿ ಜೊತೆ ಅಕ್ರಮ ಸಂಬಂಧ ಅನುಮಾನ: ಯುವಕನನ್ನು ಗುಂಡಿಟ್ಟು ಕೊಲ್ಲಲು ಯತ್ನಿಸಿದ ವ್ಯಕ್ತಿ

ಮಂಡ್ಯ: ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ವ್ಯಕ್ತಿಯೋರ್ವ ಯುವಕನನ್ನು ಗುಂಡಿಟ್ಟು ಹತ್ಯೆಗೈಯ್ಯಲು ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆಯ ಪಾಡವಪುರ ತಾಲೂಕಿನ ಶಂಭೋವಿನಹಳ್ಳಿಯಲ್ಲಿ ನಡೆದಿದೆ.

ಯುವಕ ಮಂಜು ಎಂಬಾತನ ಮೇಲೆ ಶಿವರಾಜು ಎಂಬಾತ ಗುಂಡಿನ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಂಜುನನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಶಿವರಾಜು ಮುಂಬೈನಲ್ಲಿ ಹೋಟೆಲ್ ನಲ್ಲಿ ಕೆಲಸದಲ್ಲಿದ್ದ. ಕೆಲದಿನಗಳ ಹಿಂದೆ ಮನೆಗೆ ಬಂದಿದ್ದ. ತನ್ನ ಪತ್ನಿ ಜೊತೆ ಯುವಕ ಮಂಜು ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ಹಿನ್ನೆಲೆಯಲ್ಲಿ ಮನೆಯ ಜಗುಲಿಯ ಮೇಲೆ ಕುಳಿತಿದ್ದ ಮಂಜುವಿನ ಮೇಲೆ ಗುಂಡೇಟು ಹೊಡೆದಿದ್ದಾನೆ. ಯುವಕನ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ಶಿವರಾಜುನನ್ನು ಬಂಧಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular