HomeLatest NewsBIG NEWS: ಈಜಲು ಹೋಗಿದ್ದಾಗ ದುರಂತ: ಕಾರ್ಖಾನೆ ಉದ್ಯೋಗಿ ಕಾವೇರಿ ನದಿ ಪಾಲು

BIG NEWS: ಈಜಲು ಹೋಗಿದ್ದಾಗ ದುರಂತ: ಕಾರ್ಖಾನೆ ಉದ್ಯೋಗಿ ಕಾವೇರಿ ನದಿ ಪಾಲು

ಮಂಡ್ಯ: ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ, ಕಾರ್ಖಾನೆ ಉದ್ಯೋಗಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ತಾಲೂಕಿನ ಮಹದೇವಪುರದಲ್ಲಿ ನಡೆದಿದೆ.

ಮಹೇಶ್ (35) ಮೃತ ದುರ್ದೈವಿ. ಸ್ನೇಹಿತನ ಮನೆ ಗೃಹಪ್ರವೇಶಕ್ಕೆಂದು ಶ್ರೀರಂಗಪಟ್ಟಣದ ತರೀಪುರ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಬೆಳಿಗ್ಗೆ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದರು. ಈ ವೇಳೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೃತ ಮಹೇಶ್ ಮೈಸೂರಿನ ವಿಕ್ರಾಂತ್ ಕಾರ್ಖಾನೆ ನೌಕರ. ಅರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular