HomeKarnatakaBREAKING NEWS: ಬೇಸಿಗೆ ರಜೆಗೆ ಅಜ್ಜಿಯ ಮನೆಗೆ ಬಂದ್ದಿದ್ದ ವೇಳೆ ದುರಂತ; ಕೆರೆಯಲ್ಲಿ ಈಜಲು ಹೋಗಿ...

BREAKING NEWS: ಬೇಸಿಗೆ ರಜೆಗೆ ಅಜ್ಜಿಯ ಮನೆಗೆ ಬಂದ್ದಿದ್ದ ವೇಳೆ ದುರಂತ; ಕೆರೆಯಲ್ಲಿ ಈಜಲು ಹೋಗಿ ನಿರುಪಾಲಾದ ಬಾಲಕ

ಮಂಡ್ಯ: ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹಟ್ನಾ ಗ್ರಾಮದಲ್ಲಿ ನಡೆದಿದೆ.

ಬೆಂಗಳೂರಿನ ಬಾಲರಾಜ್ (15) ಮೃತ ಬಾಲಕ. ಬೇಸಿಗೆ ರಜೆ, ಯುಗಾದಿ ಹಬ್ಬಕ್ಕೆಂದು ಅಜ್ಜಿಯ ಮನೆಗೆ ಬಂದಿದ್ದ ಬಾಲಕ ಸ್ನೇಹಿತರ ಜೊತೆ ಕೆರೆಗೆ ಈಜಲು ತೆರಳಿದ್ದ. ಈ ವೇಳೆ ಬಾಲಕ ನೀರುಪಾಲಾಗಿದ್ದಾನೆ.

ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular