HomeEntertainment'ಮನಮೆ' ಚಿತ್ರದ ಲಿರಿಕಲ್ ಹಾಡು ರಿಲೀಸ್

‘ಮನಮೆ’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಶರ್ವಾನಂದ್ ಮತ್ತು ಕೃತಿ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ‘ಮನಮೇ’ ಚಿತ್ರದ ತಪ್ಪಾ ತಪ್ಪಾ ಎಂಬ ಲಿರಿಕಲ್ ಹಾಡು ಇಂದು ಸೋನಿ ಮ್ಯೂಸಿಕ್ ಸೌತ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ರಾಮ್ ಮಿಯಾರಿಕ್ ಮತ್ತು ಹೇಶಮ್ ಅಬ್ದುಲ್ ವಹಾಬ್ ಈ ಹಾಡಿಗೆ ಧ್ವನಿಯಾಗಿದ್ದು, ಕಾಸರ್ಲಾ ಶಾಮ್ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ನಲ್ಲಿ ಟಿ ಜಿ ವಿಶ್ವಪ್ರಸಾದ್ ನಿರ್ಮಾಣ ಮಾಡಿದ್ದು, ಶರ್ವಾನಂದ್, ಕೃತಿ ಶೆಟ್ಟಿ ಸೇರಿದಂತೆ ವಿಕ್ರಮ್ ಆದಿತ್ಯ, ಸೀರತ್ ಕಪೂರ್, ಆಯೇಶಾ ಖಾನ್, ವೆನ್ನೆಲ ಕಿಶೋರ್, ರಾಹುಲ್ ರವೀಂದ್ರನ್, ರಾಹುಲ್ ರಾಮಕೃಷ್ಣ ಹಾಗೂ ಸುದರ್ಶನ್ ತೆರೆ ಹಂಚಿಕೊಂಡಿದ್ದಾರೆ. ಪ್ರವೀಣ್ಪುಡಿ ಸಂಕಲನ, ಅರ್ಜುನ್ ಮತ್ತು ವೆಂಕಟ್ ಸಂಭಾಷಣೆ, ರಾಜು ಸುಂದರಂ, ಶೋಭಿ, ಶ್ರಾಸ್ತಿ ವರ್ಮಾ ಮತ್ತು ವಿಜಯ್ ಪೋಲಾಕಿ ನೃತ್ಯ ನಿರ್ದೇಶನವಿದೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular