HomeInternationalಮೋಡಗಳ ನಡುವೆ ಸಲೀಸಾಗಿ ನಡೆದಾಟ; ವಿಡಿಯೋ ವೈರಲ್....!

ಮೋಡಗಳ ನಡುವೆ ಸಲೀಸಾಗಿ ನಡೆದಾಟ; ವಿಡಿಯೋ ವೈರಲ್….!

ಆಕಾಶದಲ್ಲಿ ಮೋಡಗಳ ನಡುವೆ ನಡೆಯಲು ಸಾಧ್ಯವಾ ? ಹೀಗೊಂದು ಪ್ರಶ್ನೆಯನ್ನ ನಮಗೆ ನಾವೇ ಹಾಕಿಕೊಂಡರೆ ಅಸಾಧ್ಯ ಎಂಬ ಉತ್ತರವೇ ನಮ್ಮದಾಗಿರುತ್ತದೆ.

ಆದರೆ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವ ವೀಡಿಯೋವೊಂದರಲ್ಲಿ ವ್ಯಕ್ತಿಯೊಬ್ಬರು ಆಕಾಶದಲ್ಲಿ ಮೋಡಗಳ ಮೇಲೆ ನಡೆಯುತ್ತಿರುವುದನ್ನು ತೋರಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಕೈಡೈವಿಂಗ್ ಮಾಡುವಾಗ ಆಕಾಶದಲ್ಲಿ ಚಲಿಸುವ ಮನುಷ್ಯನ ಅಸಾಧಾರಣ ಕೌಶಲ್ಯಗಳನ್ನು ವೀಡಿಯೊ ಪ್ರದರ್ಶಿಸುತ್ತದೆ. ವೀಡಿಯೊದಲ್ಲಿ ಸ್ವಿಫ್ಟ್ ಚಲನೆಗಳನ್ನು ಪ್ರದರ್ಶಿಸಲಾಗುತ್ತದೆ.

ವಿಡಿಯೋದಲ್ಲಿ ವ್ಯಕ್ತಿ ಸಲೀಸಾಗಿ ಮೋಡಗಳ ಮೇಲೆ ಚಲಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ವೈರಲ್ ಆಗಿದ್ದು ಹಲವರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಕೆಲವರು ಈ ಸಾಹಸವನ್ನ ಇದೊಂಥರ ಹುಚ್ಚು ಎಂದು ಕರೆದಿದ್ದಾರೆ. ಮತ್ತೊಬ್ಬರು ನಾನು ಭೂಮಿಯಲ್ಲಿ ಇಷ್ಟು ಚೆನ್ನಾಗಿ ನಡೆಯಲು ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದೇನು ಕನಸಾ ? ನಿಜಾನಾ ? ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular