ಸಹೋದರಿಗೆ ಉಡುಗೊರೆ ನೀಡಲು ಮುಂದಾದ ವ್ಯಕ್ತಿ ಬಡಿದು ಕೊಂದ ಪತ್ನಿಯ ಸಂಬಂಧಿಕರು

ಬಾರಾಬಂಕಿ: ತನ್ನ ಸಹೋದರಿಗೆ ಎಲ್‌ಇಡಿ ಟಿವಿ ಮತ್ತು ಚಿನ್ನದ ಉಂಗುರವನ್ನು ಮದುವೆಗೆ ಉಡುಗೊರೆಯಾಗಿ ನೀಡುವ ಬಗ್ಗೆ ಜಗಳ ನಡೆದ ನಂತರ ವ್ಯಕ್ತಿಯೊಬ್ಬನನ್ನು ಆತನ ಪತ್ನಿಯ ಸಂಬಂಧಿಕರು ಕೊಂದಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆದ ಈ ಪ್ರಕರಣದಲ್ಲಿ ವ್ಯಕ್ತಿಯ ಪತ್ನಿ ಮತ್ತು ಸಹೋದರ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಸೋದರಿಗೆ ಉಡುಗೊರೆ ನೀಡುವ ವಿಚಾರವಾಗಿ ಚಂದ್ರ ಪ್ರಕಾಶ್ ಮಿಶ್ರಾ ಮತ್ತು ಆತನ ಪತ್ನಿ ಕ್ಷಮಾ ನಡುವೆ ಜಗಳ ನಡೆದಿತ್ತು. ಮಂಗಳವಾರ ಕ್ಷಮಾ ಮಿಶ್ರಾ ತನ್ನ ಸಹೋದರ ಮತ್ತು ಇತರ ಕೆಲವು ಸಂಬಂಧಿಕರನ್ನು ಕದರಾಬಾದ್‌ ನಲ್ಲಿರುವ ತನ್ನ ಮನೆಗೆ ಕರೆಸಿಕೊಂಡಾಗ ಈ ಘಟನೆ ಸಂಭವಿಸಿದೆ.

ಏಪ್ರಿಲ್ 26 ರಂದು ತನ್ನ ಸಹೋದರಿ ಮದುವೆಗೆ ಎಲ್‌ಇಡಿ ಟಿವಿ ಮತ್ತು ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಲು ಚಂದ್ರು ಬಯಸಿದ್ದರು. ಆದರೆ, ಅವರ ಪತ್ನಿ ಕ್ಷಮಾ ಅದನ್ನು ವಿರೋಧಿಸಿದ್ದರು ಎಂದು ಪೊಲೀಸ್ ಸರ್ಕಲ್ ಆಫೀಸರ್(ಸಿಒ) ಫತೇಪುರ್ ಡಾ. ಬಿನು ಸಿಂಗ್ ಹೇಳಿದ್ದಾರೆ.

ಕ್ಷಮಾ ಅವರ ಸಂಬಂಧಿಕರ ಹಸ್ತಕ್ಷೇಪವನ್ನು ಚಂದ್ರು ಪ್ರಶ್ನಿಸಿದಾಗ, ಅವರು ಆತನನ್ನು ಲಾಠಿಯಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಚಂದ್ರನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಎಲ್ಲಾ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read