HomeCrimeಅಕ್ರಮ ಸಂಬಂಧ ವಿಚಾರಕ್ಕೆ ದಂಪತಿ ಜಗಳ: ಮನೆಗೆ ಬಂದ ಪ್ರಿಯಕರನಿಂದ ಘೋರ ಕೃತ್ಯ

ಅಕ್ರಮ ಸಂಬಂಧ ವಿಚಾರಕ್ಕೆ ದಂಪತಿ ಜಗಳ: ಮನೆಗೆ ಬಂದ ಪ್ರಿಯಕರನಿಂದ ಘೋರ ಕೃತ್ಯ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರದ ಜೆಪಿ ನಗರ ಬಡಾವಣೆಯಲ್ಲಿ ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಮತ್ತು ಪ್ರಿಯಕರನನ್ನು ಸಾಗರ ಟೌನ್ ಠಾಣೆ ಪೋಲೀಸರು ಬಂಧಿಸಿದ್ದಾರೆ.

ಪರಶುರಾಮ್(38) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಚೈತ್ರಾ ಮತ್ತು ಮಂಜುನಾಥ ಅಲಿಯಾಸ್ ಟೀ ಪುಡಿ ಮಂಜು ಎಂಬುವರನ್ನು ಬಂಧಿಸಲಾಗಿದೆ. ಚೈತ್ರಾ ಮತ್ತು ಮಂಜುನಾಥನ ನಡುವೆ ಅನೈತಿಕ ಸಂಬಂಧವಿದ್ದು, ಈ ವಿಚಾರ ಪರಶುರಾಮನಿಗೆ ಗೊತ್ತಾಗಿ ಗಲಾಟೆ ಆಗಿತ್ತು.

ಮೇ 15 ರಂದು ರಾತ್ರಿ ದಂಪತಿಯ ನಡುವೆ ಗಲಾಟೆ ನಡೆಯುವಾಗ ಆರೋಪಿ ಮಂಜುನಾಥ ಮನೆಗೆ ಬಂದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಜಗಳದ ವೇಳೆ ಮಂಜುನಾಥ ಚಾಕುವಿನಿಂದ ಪರಶುರಾಮನಿಗೆ ಇರಿದಿದ್ದಾನೆ. ತೀವ್ರ ಇರಿತಕ್ಕೆ ಒಳಗಾದ ಪರಶುರಾಮನನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ ಮತ್ತು ಚೈತ್ರಾ ಅವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular