ಜಿ 20 ಶೃಂಗಸಭೆಗಾಗಿ ವಿಶ್ವ ನಾಯಕರು ದೆಹಲಿಯಲ್ಲಿ ಒಗ್ಗೂಡಿದ್ದಾರೆ. ಈ ನಡುವೆ ಜಿ20 2023 ಎಂಬ ನಾಮಫಲಕ ಹೊಂದಿರುವ ಧ್ವಜ ಹಿಡಿದ ವ್ಯಕ್ತಿಯೊಬ್ಬರು ಸ್ಕೈಡೈವಿಂಗ್ ಮಾಡಿದ್ದು ಇದರ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.
ಭಾರತದ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಶುಕ್ರವಾರದಂದು ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಜಿ 20 ಸ್ಕೈಡೈವಿಂಗ್ ಸಖತ್ ರೋಮಾಂಚನಕಾರಿಯಾಗಿದೆ.
ನೂತನವಾಗಿ ಉದ್ಘಾಟನೆಗೊಂಡಿರುವ ಭಾರತ್ ಮಂಟಪ್ನಲ್ಲಿ ನಡೆಯುತ್ತಿರುವ ಎರಡು ದಿನಗಳ ಜಿ 20 ನಾಯಕರ ಶೃಂಗಸಭೆಯು ಭಾರತಕ್ಕೆ ಹೆಮ್ಮೆಯ ವಿಚಾರವಾಗಿದ್ದು ಇದೇ ಕಾರಣಕ್ಕಾಗಿ ಈ ವ್ಯಕ್ತಿಯು ಜಿ 20 ಧ್ವಜ ಹಿಡಿದು ಸ್ಕೈಡೈವಿಂಗ್ ಮಾಡಿದ್ದಾರೆ ಎನ್ನಲಾಗಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸಚಿವ ಕಿರಣ್ ರಿಜಿಜು, ನನಗೆ ಇದು ತುಂಬಾನೇ ಇಷ್ಟವಾಯ್ತು ಅಂತಾ ಶೀರ್ಷಿಕೆ ನೀಡಿದ್ದಾರೆ.
ಮಾರ್ಚ್ ತಿಂಗಳಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರು ರಾಜಸ್ಥಾನದಲ್ಲಿ ಜಿ 20 – 2023 ಧ್ವಜವನ್ನು ಹಿಡಿದು ಸ್ಕೈಡೈವಿಂಗ್ ಮಾಡಿದ್ದರು. ಸೌತ್ ವೆಸ್ಟರ್ನ್ ಏರ್ ಕಮಾಂಡ್ ನೀಡಿರುವ ಮಾಹಿತಿಯ ಪ್ರಕಾರ, ವಿಂಗ್ ಕಮಾಂಡರ್ ಗಜಾನಂದ ಯಾದವ್ 1000 ಅಡಿ ಎತ್ತರದಿಂದ ವಸುದೈವ ಕುಟುಂಬಕಂ – ಒಂದು ಭೂಮಿ, ಒಂದು ಕುಟುಂಬ , ಒಂದು ಭವಿಷ್ಯ ಎಂಬ ಥೀಮ್ ಹೊಂದಿದ್ದ ಜಿ 20 ಧ್ವಜ ಹಿಡಿದು ಸ್ಕೈಡೈವ್ ಮಾಡಿದ್ದರು.
https://twitter.com/i/status/1700056535697912177