ಕಾರ್ಮಿಕರು ಸಾಮಾನ್ಯವಾಗಿ ಕಠಿಣ ಮತ್ತು ಪರೀಕ್ಷಾ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಾರೆ, ಸುರಕ್ಷತಾ ಕಾರ್ಯವಿಧಾನಗಳನ್ನು ಅನುಸರಿಸುವಾಗ ಎಚ್ಚರಿಕೆ ತೆಗೆದುಕೊಳ್ಳುವುದು ಕಡಿಮೆ.
ಅಂಥದ್ದೇ ಒಂದು ಆತಂಕಕಾರಿ ವಿಡಿಯೋ ವೈರಲ್ ಆಗಿದೆ. ಯಾವುದೇ ಸುರಕ್ಷತಾ ಮಾನದಂಡಗಳನ್ನು ಅನುಸರಿಸದೆ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಶ್ರೀನಗರ ಮೂಲದ ವೈದ್ಯ ಡಾ. ಶೌಕತ್ ಶಾ ಅವರು ಟ್ವಿಟರ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ,
“ಅವರಿಗೆ ಮೆಚ್ಚುಗೆ ಮತ್ತು ಎಲ್ಲಾ ಪ್ರಶಂಸೆ ಬೇಕು” ಎಂಬ ಶೀರ್ಷಿಕೆಯೊಂದಿಗೆ ಇದನ್ನು ಪೋಸ್ಟ್ ಮಾಡಿದ್ದಾರೆ.
ಜೀವನೋಪಾಯಕ್ಕಾಗಿ ಮನುಷ್ಯನು ಕೆಲಸ ಮಾಡಬೇಕಾದ ಕಠೋರ ಪರಿಸ್ಥಿತಿಗಳನ್ನು ಇದು ತೋರಿಸುತ್ತಿದೆ. ಕಟ್ಟಡದ ಮೇಲ್ಭಾಗದಲ್ಲಿ ಕಿರಿದಾದ ಸ್ಕ್ಯಾಫೋಲ್ಡಿಂಗ್‌ನ ಮೇಲೆ ಕುಳಿತಿರುವ ವ್ಯಕ್ತಿಯನ್ನು ವಿಡಿಯೋದಲ್ಲಿ ನೋಡಬಹುದು,
ಸ್ವಲ್ಪ ಹೆಚ್ಚೂ ಕಡಿಮೆ ಆದರೂ ಕಾರ್ಮಿಕನ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ಮೆಚ್ಚುಗೆ ಸೂಚಿಸುವುದು ನಂತರದ ಮಾತು. ಆದರೆ ಕಾರ್ಮಿಕರ ಜೀವವನ್ನು ಅಪಾಯಕ್ಕೆ ಒಡ್ಡಿ ಇಂಥದ್ದೊಂದು ಕೆಲಸ ಮಾಡಿಸಿಕೊಳ್ಳುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
He needs appreciation and all praise… pic.twitter.com/fVcUqsJFIC
— Dr Showkat Shah (@shahshowkat07) January 8, 2023