ಅಮಾನುಷವಾದ ಕೃತ್ಯಗಳನ್ನು ಎಸಗುವವರು ಇರುವ ನಡುವೆಯೇ ಪ್ರಾಣಿ, ಪಕ್ಷಿಗಳ ಮೇಲೆ ಪ್ರೀತಿಯ ಧಾರೆಯನ್ನು ಎರೆಯುವವರೂ ಸಿಗುತ್ತಾರೆ. ಅಂಥದ್ದೇ ವಿಡಿಯೋ ಒಂದು ವೈರಲ್ ಆಗಿದೆ.
ದಿ ಫಿಗೆನ್‌ನಿಂದ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಹೆದ್ದಾರಿಯ ಮಧ್ಯದಲ್ಲಿರುವ ವಿಭಜಕವನ್ನು ಏರಲು ಪ್ರಯತ್ನಿಸುತ್ತಿರುವ ಬೆಕ್ಕಿನ ಮರಿಯನ್ನು ಹೊರಕ್ಕೆ ತೆಗೆದು ಸುರಕ್ಷಿತವಾಗಿ ಕೊಂಡೊಯ್ಯುವುದನ್ನು ನೋಡಬಹುದು.
ವೀಡಿಯೊ 1.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಅನೇಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಅಮಾನವೀಯವಾಗಿ ವರ್ತಿಸುವವರ ನಡುವೆ ಇಂಥವರೂ ಇದ್ದಾರೆ ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಕೂಡ ಇಂಥ ಕೆಲವು ವಿಡಿಯೋಗಳು ವೈರಲ್ ಆಗಿವೆ. ಜನರು ಪ್ರಾಣಿ ಪಕ್ಷಿಗಳ ಮೇಲೆ ಪ್ರೀತಿ ತೋರುವ ವಿಡಿಯೋಗಳನ್ನು ಆಗಾಗ್ಗೆ ಕಾಣಬಹುದು. ಕೆಲವರು ವಿಡಿಯೋ ಮಾಡಿಸಿಕೊಂಡು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರೆ, ಇನ್ನು ಹಲವರು ಯಾವುದೇ ಪ್ರಚಾರ, ಸದ್ದು-ಗದ್ದಲವಿಲ್ಲದೇ ತಮ್ಮ ಪಾಡಿಗೆ ತಾವು ಪ್ರೀತಿಯ ಧಾರೆ ಎರೆಯುವುದನ್ನು ಕಾಣಬಹುದು.
https://twitter.com/TheFigen_/status/1642160510647902209?ref_src=twsrc%5Etfw%7Ctwcamp%5Etweetembed%7Ctwterm%5E1642160510647902209%7Ctwgr%5E01c49ec334d56ac583c9ac3931068d8c3507f527%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-saves-muddy-little-kitten-stuck-beside-busy-highway-internet-showers-praise-2354799-2023-04-02
https://twitter.com/ErbilK47/status/1642257463046021122?ref_src=twsrc%5Etfw%7Ctwcamp%5Etweetembed%7Ctwterm%5E164
https://twitter.com/KlassyLassie/status/1642284557205647360?ref_src=twsrc%5Etfw%7Ctwcamp%5Etweetembed%7Ctwterm%5