SHOCKING: ಮದುವೆ ನಿರಾಕರಿಸಿದ ಅಪ್ರಾಪ್ತೆ ಮೇಲೆ 3 ದಿನ ರೇಪ್, ಕಾದ ಕಬ್ಬಿಣದಿಂದ ಕೆನ್ನೆ ಮೇಲೆ ಹೆಸರು ಬರೆದ ದುಷ್ಕರ್ಮಿ

ಲಖಿಂಪುರ ಖೇರಿ: ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ ಅಪ್ರಾಪ್ತಳ ಮೇಲೆ 3 ದಿನಗಳ ಕಾಲ ಅತ್ಯಾಚಾರ ಮಾಡಿದ ವ್ಯಕ್ತಿ, ಬಿಸಿ ಕಬ್ಬಿಣದಿಂದ ಅವಳ ಮುಖದ ಮೇಲೆ ತನ್ನ ಹೆಸರು ಬರೆದಿದ್ದಾನೆ.

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿಯನ್ನು ಮೂರು ದಿನಗಳ ಕಾಲ ಸೆರೆಯಲ್ಲಿಟ್ಟುಕೊಂಡು ತನ್ನ ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ ನಂತರ ಪದೇ ಪದೇ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಶನಿವಾರ ಬಂಧಿಸಲಾಗಿದೆ.

17 ವರ್ಷದ ಸಂತ್ರಸ್ತೆಯನ್ನು ಥಳಿಸಲಾಗಿದ್ದು, ಪೊಲೀಸರ ಪ್ರಕಾರ, ಆರೋಪಿಯು ಬಿಸಿ ಕಬ್ಬಿಣದ ರಾಡ್ ಬಳಸಿ ತನ್ನ ಹೆಸರಿನ ‘ಅಮನ್’ ಎಂಬ ಅಕ್ಷರಗಳನ್ನು ಅವಳ ಮುಖದ ಮೇಲೆ ಬರೆದಿದ್ದಾನೆ. ಆರೋಪಿ ಹೈದರಾಬಾದ್‌ನ ಸಲೂನ್‌ನಲ್ಲಿ ಕೆಲಸ ಮಾಡುವ 22 ವರ್ಷದ ಯುವಕ.

ಪೊಲೀಸರು ಆರಂಭದಲ್ಲಿ ಅಕ್ರಮ ಬಂಧನ ಮತ್ತು ಸ್ವಯಂಪ್ರೇರಣೆಯಿಂದ ಗಾಯಗೊಳಿಸುವಂತಹ ‘ಕಡಿಮೆ’ ವಿಭಾಗಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಸಿಆರ್‌ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ದಾಖಲಿಸಿದ ನಂತರ, ಪೋಕ್ಸೊ ಕಾಯ್ದೆಯ ಜೊತೆಗೆ ಅತ್ಯಾಚಾರಕ್ಕೆ ಸಂಬಂಧಿಸಿದ ಸೆಕ್ಷನ್‌ಗಳನ್ನು ಎಫ್‌ಐಆರ್‌ಗೆ ಸೇರಿಸಲಾಗಿದೆ.

ಅವಳು ಗುರುತಿನ ಚೀಟಿಯನ್ನು ಹೊಂದಿರಲಿಲ್ಲವಾದ್ದರಿಂದ, ಅವಳು ಅಪ್ರಾಪ್ತಳೇ ಎಂದು ನಮಗೆ ಖಚಿತವಾಗಿರಲಿಲ್ಲ. ನಾವು ಪೋಕ್ಸೋ ಕಾಯ್ದೆನ್ನು ಸೇರಿಸಿದ್ದೇವೆ ಎಂದು ಎಸ್‌ಹೆಚ್‌ಒ (ಧೌರಾಹ್ರಾ) ದಿನೇಶ್ ಸಿಂಗ್ ಹೇಳಿದ್ದಾರೆ.

ಎಸ್‌ಎಸ್‌ಪಿ(ಖೇರಿ) ಗಣೇಶ್ ಸಹಾ ಅವರು, ಅವಳ ಕುಟುಂಬದ ದೂರಿನ ಆಧಾರದ ಮೇಲೆ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ಹುಡುಗಿಯ ವೀಡಿಯೊ ಹೇಳಿಕೆಯನ್ನು ದಾಖಲಿಸಲಾಗಿದೆ. ಆಕೆಯ ಆರೋಪದ ಮೇರೆಗೆ ಇದೀಗ ತನಿಖೆ ಆರಂಭಿಸಿದ್ದೇವೆ. ಆರೋಪಿಯನ್ನು ಬಂಧಿಸಲಾಗಿದೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read