ಬೆಂಗಳೂರು: ಸ್ನೇಹಿತರಿಬ್ಬರು ಕುಡಿದ ಅಮಲಿನಲ್ಲಿ ಜಗಳ ಮಾಡಿಕೊಂಡಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಸೀಗೇಹಳ್ಳಿಯಲ್ಲಿ ಜಾರ್ಖಂಡ್ ಮೂಲದ ಪವನ್ (40) ಕೊಲೆಯಾಗಿರುವ ದುರ್ದೈವಿ. ಮದ್ಯ ಸೇವನೆ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಣೇಶ್ ಎಂಬಾತ ಪವನ್ ಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾದ ಪವನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಜಾರ್ಖಂಡ್ ಮೂಲದವರಾಗಿದ್ದ ಪವನ್ ಹಾಗೂ ಗಣೇಶ್ ಇಬ್ಬರೂ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದರು. ಇಬ್ಬರ ನಡುವೆ ಜಗಳ ಆರಂಭವಾಗಿ ಪವನ್ ಎದೆಗೆ ಗಣೇಶ್ ಚಾಕು ಇರಿದಿದ್ದಾನೆ. ಘಟನ ಅಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಗಣೇಶ್ ನನ್ನು ಬಂಧಿಸಿದ್ದಾರೆ.