
ಹೌದು, ವ್ಯಕ್ತಿಯೊಬ್ಬ ಪಾಂಡಾ ಆವರಣಕ್ಕೆ ನುಗ್ಗಿ ಪ್ರಾಣಿಯ ಕೆಂಗಣ್ಣಿಗೆ ಗುರಿಯಾಗಿರುವ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದೆ. ಯುವಕನೊಬ್ಬ ತನ್ನ ಆವರಣದೊಳಗೆ ಮಲಗಿದ್ದ ಪಾಂಡಾದತ್ತ ಸಮೀಪಿಸಿದ್ದಾನೆ. ಆ ವೇಳೆಗೆ ಅದು ನಿದ್ರಿಸುತ್ತಿರುವಂತೆ ತೋರುತ್ತಿದೆ. ಈ ವೇಳೆ ಪಾಂಡಾವನ್ನು ಆ ವ್ಯಕ್ತಿ ಚುಚ್ಚುತ್ತಾನೆ. ಇದರಿಂದ ಎಚ್ಚೆತ್ತ ಪಾಂಡಾ ಆ ವ್ಯಕ್ತಿಯ ಕಾಲನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ.
ವ್ಯಕ್ತಿಯು ಭೀತಿಗೊಂಡಂತೆ ತೋರುತ್ತದೆ. ಆತ ತನ್ನನ್ನು ಪ್ರಾಣಿಯ ಹಿಡಿತದಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ, ಅದು ಸಾಧ್ಯವಾಗದೆ ಆತ ಮುಗ್ಗರಿಸಿ ಬೀಳುತ್ತಾನೆ. ಬಹಳ ಪ್ರಯತ್ನ ಪಟ್ಟ ಬಳಿಕ ಪ್ರಾಣಿಯಿಂದ ತನ್ನನ್ನು ಮುಕ್ತಗೊಳಿಸಿ, ಆವರಣದಿಂದ ಹೊರಗೆ ಓಡುತ್ತಾನೆ.
ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ 4.2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ವ್ಯಕ್ತಿ ಪಾಂಡಾಕ್ಕೆ ಕೀಟಲೆ ಮಾಡಿದ್ರೂ ಅದು ಆತನ ಜೀವ ಉಳಿಸಿದ್ದು ಆತನ ಅದೃಷ್ಟ ಎಂದು ಹಲವು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಅಂದಹಾಗೆ ಈ ಘಟನೆ ಚೀನಾದ ಜಿಯಾಂಗ್ಸಿ ಪ್ರಾಂತ್ಯದ ನಾನ್‌ಚಾಂಗ್ ಮೃಗಾಲಯದಲ್ಲಿ ನಡೆದಿದೆ. ಸ್ಥಳದಲ್ಲಿದ್ದ ಮತ್ತೊಬ್ಬ ಪ್ರವಾಸಿಗರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಪಾಂಡಾಗಳು ನಿರುಪದ್ರವವಾಗಿ ತೋರುತ್ತಿದ್ದರೂ, ಅವು ತಮ್ಮ ಹಲ್ಲುಗಳು ಮತ್ತು ಚೂಪಾದ ಉಗುರುಗಳಿಂದ ಗಂಭೀರ ಗಾಯಗೊಳಿಸಬಹುದು.
Dude jumps into panda exhibit and finds out pic.twitter.com/Lyg8XK4zGW
— Pepe Meme (@pepe_fgm) October 30, 2023

