ಬ್ರೆಡ್‌ ತರಲು ಹೋದವನಿಗೆ‌ ಬಂಪರ್…..!‌ ಲಾಟರಿಯಲ್ಲಿ ಬರೋಬ್ಬರಿ 82 ಲಕ್ಷ ರೂ. ಬಹುಮಾನ

ಏನಾದರು ಕೊಳ್ಳಲು ಕಿರಾಣಿ ಅಂಗಡಿಗೆ ಹೋಗಿ ನೆಲದ ಮೇಲೆ ಬಿದ್ದಿರುವ 100 ಅಥವಾ 500 ರೂ ನೋಟು ಕಂಡು ನಿಮಗೆ ಏನನ್ನಿಸುತ್ತದೆ ? ನೀವು ಅದೃಷ್ಟವಂತರು ಎಂದು ಭಾವಿಸುತ್ತೀರಿ.

ಆದರೆ ಅಮೆರಿಕದ ಈ ವ್ಯಕ್ತಿ ಹೀಗೆ ಕಿರಾಣಿ ಅಂಗಡಿಗೆ ಹೋಗಿದ್ದೇ ಆತನ ಭಾಗ್ಯ ಖುಲಾಯಿಸಿದೆ. ಆತನಿಗೆ $ 1,00,000 (ಸುಮಾರು 82.85 ಲಕ್ಷ ರೂಪಾಯಿ) ವಾಪಸ್‌ ತಂದಿದ್ದಾನೆ….!

ಹಾರ್ಫೋರ್ಡ್ ಕೌಂಟಿಯ 65 ವರ್ಷದ ವ್ಯಕ್ತಿಯೊಬ್ಬ ಅಂಗಡಿಗೆ ಬ್ರೆಡ್‌ ತರಲು ಹೋಗಿದ್ದ. ಅಂಗಡಿಯಲ್ಲಿನ ವಿತರಣಾ ಯಂತ್ರಗಳು ಕಿಕ್ಕಿರಿದು ತುಂಬಿದ್ದವು.

ಟೈಂ ಪಾಸ್‌ ಹೇಗೆ ಮಾಡುವುದು ಎಂದು ತಿಳಿಯದೇ ಆತ ಅಲ್ಲಿಯೇ ಇದ್ದ ಲಾಟರಿ ಟಿಕೆಟ್ ಖರೀದಿಸಿದ. ಕ್ಯೂ ಜಾಸ್ತಿಯಾಗಿದ್ದರಿಂದ ಬ್ರೆಡ್‌ ಬೇರೆ ಕಡೆ ತೆಗೆದುಕೊಂಡರೆ ಆಯಿತು ಎಂದು ವಾಪಸ್‌ ಬಂದ.

ನಂತರ ಲಾಟರಿ ಟಿಕೆಟ್‌ ಡ್ರಾ ಆದಾಗ ಈ ವ್ಯಕ್ತಿಗೆ ತಲೆ ತಿರುಗಿ ಹೋಯಿತು. ಆತನಿಗೆ $1,00,000 (ರೂ. 82.85 ಲಕ್ಷ) ಬಹುಮಾನ ಸಿಕ್ಕಿರುವ ವಿಷಯ ತಿಳಿದು ಮೂರ್ಛೆ ಹೋದ. ಮೊದಲಿಗೆ ಕುಟುಂಬಸ್ಥರು ಇದನ್ನು ತಮಾಷೆ ಎಂದುಕೊಂಡರು. ನಂತರ ನಿಜಕ್ಕೂ ಬಹುಮಾನ ಗೆದ್ದ ಸುದ್ದಿ ಕೇಳಿ ಅವರೂ ಕಂಗಾಲಾಗಿ ಹೋದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read