HomeIndiaವಿಕಲಚೇತನನಂತೆ ನಟಿಸಿ ಭಿಕ್ಷಾಟನೆ; ಸಿಕ್ಕಿಬೀಳುತ್ತಿದ್ದಂತೆ ಊರುಗೋಲು ಬಿಟ್ಟು ಪರಾರಿ | VIDEO

ವಿಕಲಚೇತನನಂತೆ ನಟಿಸಿ ಭಿಕ್ಷಾಟನೆ; ಸಿಕ್ಕಿಬೀಳುತ್ತಿದ್ದಂತೆ ಊರುಗೋಲು ಬಿಟ್ಟು ಪರಾರಿ | VIDEO

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ವೈರಲ್ ಆಗಿರುವ ವಿಡಿಯೋವೊಂದು ವೀಕ್ಷಕರನ್ನು ದಂಗಾಗಿಸಿದೆ. ಗ್ಯಾರಿ ವಾಲಿಯಾ (@garrywalia_) ಎಂಬ ಬಳಕೆದಾರರಿಂದ ಪೋಸ್ಟ್ ಮಾಡಲಾದ ವೀಡಿಯೊ ಎಲ್ಲರ ಗಮನವನ್ನು ಸೆಳೆದಿದೆ.

“ಈ ವೀಡಿಯೊವನ್ನು ನೋಡಿದರೆ ನೀವು ಆಘಾತಕ್ಕೊಳಗಾಗುತ್ತೀರಿ” ಎಂಬ ಶೀರ್ಷಿಕೆಯನ್ನು ಇದಕ್ಕೆ ನೀಡಲಾಗಿದ್ದು, ಪೋಸ್ಟ್ ಪ್ರೇಕ್ಷಕರನ್ನು ಕುತೂಹಲ ಕೆರಳಿಸಿದೆಯಲ್ಲದೆ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.

ಕೆಲವರು ಹಣ ಸಂಪಾದಿಸಲು ಕಷ್ಟಪಡುವುದಕ್ಕಿಂತ ಹೆಚ್ಚಾಗಿ ಇತರರನ್ನು ಮರುಳು ಮಾಡಲು ಮತ್ತು ಬದುಕಲು ಬೇಡಿಕೊಳ್ಳಲು ಆಯ್ಕೆ ಮಾಡುತ್ತಾರೆ ಎಂಬುದನ್ನು ವೀಡಿಯೊ ಎತ್ತಿ ತೋರಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಇದಕ್ಕೆ ತಮ್ಮ ಕಮೆಂಟ್‌ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಊರುಗೋಲು ಸಹಾಯದಿಂದ ನಡೆಯುತ್ತಿದ್ದು, ಆತನ ಪಕ್ಕದಲ್ಲಿದ್ದ ಮಹಿಳೆ ಸಹಾಯಕ್ಕಾಗಿ ಬೇಡುತ್ತಿರುತ್ತಾಳೆ. ಆದರೆ ವಿಕಲಚೇತನನಂತೆ ಮಾಡುತ್ತಿದ್ದ ವ್ಯಕ್ತಿ ಕುರಿತು ಅನುಮಾನಗೊಂಡವರೊಬ್ಬರು ನೈಜತೆ ಪರಿಶೀಲಿಸಿದಾಗ ಅಸಲಿ ಸಂಗತಿ ಬಹಿರಂಗವಾಗಿದೆ.

ಕೈ ಕಾಲು ನೆಟ್ಟಗಿದ್ದರೂ ಸಹ ವಿಕಲಚೇತನನಂತೆ ನಟಿಸಿ ಆತ ಭಿಕ್ಷೆ ಬೇಡುತ್ತಿದ್ದು, ಇದು ಬಹಿರಂಗವಾಗುತ್ತಲೇ ಆತನಿಗೆ ಗೂಸಾ ನೀಡಲಾಗಿದೆ. ಅದಾದ ಬಳಿಕ ಆತ ಊರುಗೋಲು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

For Latest News Updates, Join Our Whatsapp Community🚩
RELATED ARTICLES

Most Popular