Shocking Video: ಉದ್ದೇಶಪೂರ್ವಕವಾಗಿ ಕಾರ್ ಹರಿಸಿ ಐವರು ಸಾವು; ವಾಹನದಿಂದ ಹೊರಬಂದು ನೋಟ್ ಎಸೆದ ಆರೋಪಿ

ಚೀನಾದ ಗುವಾಂಗ್‌ಝೌನಲ್ಲಿ ವ್ಯಕ್ತಿಯೊಬ್ಬ ಪಾದಚಾರಿಗಳ ಮೇಲೆ ಕಾರು ಚಲಾಯಿಸಿದ ಪರಿಣಾಮ ಐವರು ಮೃತಪಟ್ಟು 13 ಮಂದಿ ಗಾಯಗೊಂಡಿದ್ದಾರೆ.

ಪೊಲೀಸರು 22 ವರ್ಷದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಈ ಅಪಘಾತದ ಭೀಕರ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಆರೋಪಿ ಕಾರ್ ನಿಂದ ಹೊರಬಂದು ನೋಟುಗಳನ್ನು ಜನರ ಮೇಲೆ ಎಸೆಯುವ ಮುನ್ನ ಗುಂಪಿನ ಮೇಲೆ ಕಾರ್ ಹರಿಸಿದ್ದಾನೆ.

ಉದ್ದೇಶಪೂರ್ವಕವಾಗಿ ಜನರನ್ನು ಗುರಿಯಾಗಿಸಿಕೊಂಡಿಕೊಂಡು ಆರೋಪಿ ಕೃತ್ಯವೆಸಗಿದ್ದಾನೆಂದು ಆರೋಪಿಸಿ ಜನರು ಘಟನೆಯನ್ನು ವ್ಯಾಪಕವಾಗಿ ಖಂಡಿಸಿದ್ದಾರೆ.

ದಕ್ಷಿಣ ನಗರದ ಜನನಿಬಿಡ ಜಂಕ್ಷನ್‌ನಲ್ಲಿ ಬುಧವಾರ ಸಂಜೆಯ ಜನದಟ್ಟಣೆಯ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.

ಅಪಘಾತ ಸಂಭವಿಸಿದ ಸ್ವಲ್ಪ ಸಮಯದ ನಂತರ ಚಾಲಕನು ಕಾರಿನಿಂದ ಇಳಿದು ನೋಟುಗಳನ್ನು ಎಸೆದಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳು ತೋರಿಸಿವೆ.

ಟ್ರಾಫಿಕ್ ಸಿಗ್ನಲ್ ಗಾಗಿ ಕಾಯುತ್ತಿದ್ದ ಜನರ ಮೇಲೆ ಉದ್ದೇಶಪೂರ್ವಕವಾಗಿ ಕಾರ್ ಓಡಿಸಿದ್ದಾನೆ. ದುರುದ್ದೇಶಪೂರಿತವಾಗಿ ಅವರ ಮೇಲೆ ಕಾರನ್ನು ಡಿಕ್ಕಿ ಹೊಡೆದಿದ್ದ. ನಂತರ ಆತ ಯು-ಟರ್ನ್ ಮಾಡಿ ಮತ್ತೆ ಜನರ ಮೇಲೆ ಹಾರ್ ಹರಿಸಿದ್ದನೆಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

https://twitter.com/RRN_breaking/status/1613460809467805698?ref_src=twsrc%5Etfw%7Ctwcamp%5Etweetembed%7Ctwterm%5E1613460809467805698%7Ctwgr%5Ea427fc164890f49e082a66737fc59abde995f63e%7Ctwcon%5Es1_&ref_url=https%3A%2F%2Fwww.indiatoday.in%2Fworld%2Fstory%2Fchina-accident-guangzhou-man-drives-crowd-throws-banknotes-crash-video-2320948-2023-01-13

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read