HomeIndiaಪೊಲೀಸ್‌ ಠಾಣೆಯಲ್ಲಿ SI ಕುರ್ಚಿ‌ ಮೇಲೆ ಕುಳಿತು ಮದ್ಯ ಸೇವಿಸಿದ ಭೂಪ; ಫೋಟೋ ವೈರಲ್

ಪೊಲೀಸ್‌ ಠಾಣೆಯಲ್ಲಿ SI ಕುರ್ಚಿ‌ ಮೇಲೆ ಕುಳಿತು ಮದ್ಯ ಸೇವಿಸಿದ ಭೂಪ; ಫೋಟೋ ವೈರಲ್

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಪೊಲೀಸ್ ಠಾಣೆ ಉಸ್ತುವಾರಿಯ ಕುರ್ಚಿಯ ಮೇಲೆ ಕುಳಿತು ಮದ್ಯ ಸೇವಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯ ಉಸ್ತುವಾರಿಯನ್ನು ಅಮಾನತುಗೊಳಿಸಲಾಗಿದೆ.

ಸಹರಾನ್‌ಪುರದ ಖಾತಾ ಖೇರಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಇಮ್ರಾನ್ ಎಂದು ಗುರುತಿಸಲಾದ ವ್ಯಕ್ತಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಪೊಲೀಸ್ ಠಾಣೆಯ ಉಸ್ತುವಾರಿ ಸಚಿನ್ ತ್ಯಾಗಿ ಅವರ ಕುರ್ಚಿಯ ಮೇಲೆ ಕುಳಿತು ಲೋಟಕ್ಕೆ ಮದ್ಯ ಸುರಿಯುತ್ತಿರುವುದು ಕಂಡುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫೋಟೋದಲ್ಲಿ ಮೇಜಿನ ಮೇಲೆ ಮದ್ಯದ ಜೊತೆಗೆ ಸ್ನ್ಯಾಕ್ಸ್ ಮತ್ತು ನೀರಿನ ಬಾಟಲಿಗಳನ್ನು ಇರಿಸಿರೋದು ಕಾಣುತ್ತದೆ.

ಮಾರ್ಚ್‌ನಲ್ಲಿ ಹೋಳಿ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಫೋಟೋ ತೆಗೆಯಲಾಗಿದೆ ಎಂದು ನಂಬಲಾಗಿದೆ. ಪೋಟೋ ಪೊಲೀಸರ ಗಮನಕ್ಕೆ ಬಂದ ತಕ್ಷಣ ಎಸ್‌ಎಸ್‌ಪಿ ವಿಪಿನ್ ತಾಡಾ ಅವರು ಸಚಿನ್ ತ್ಯಾಗಿಯನ್ನು ಅಮಾನತುಗೊಳಿಸಿದ್ದಾರೆ. ಕೆಲ ದಿನಗಳ ಹಿಂದೆ ಪೊಲೀಸರು ಈ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular