Shocking News: ರೋಗಿಗೆ ಅಳವಡಿಸಿದ್ದ ಆಕ್ಸಿಜನ್​ ಮಾಸ್ಕ್​ಗೆ ಹೊತ್ತಿಕೊಂಡ ಬೆಂಕಿ

ಆಕ್ಸಿಜನ್​ ಮಾಸ್ಕ್​​ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಐಸಿಯುವಿನಲ್ಲಿದ್ದ ರೋಗಿಯು ಸಾವನ್ನಪ್ಪಿದ ಘಟನೆ ರಾಜಸ್ಥಾನದ ಕೋಟಾದ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದೆ.

ಮೃತ ವ್ಯಕ್ತಿಯು ಕೋಟಾ ಅನಂತಪುರ ತಾಲಾಬ್​ನ ನಿವಾಸಿ ವೈಭವ್​ ಶರ್ಮಾ (32) ಎಂದು ಗುರುತಿಸಲಾಗಿದೆ. ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ದುರ್ಘಟನೆ ಘಟಿಸಿದೆ ಎಂದು ಮೃತ ವೈಭವ್​ ಕುಟುಂಬಸ್ಥರು ಆರೋಪಿಸಿದ್ದಾರೆ.

ಐಸಿಯುವಿನಲ್ಲಿ ಡಿಸಿ ಕಾರ್ಡಿಯೋವರ್ಶನ್​ ಶಾಕ್​ ಟ್ರೀಟ್​ಮೆಂಟ್​ ನೀಡಿದ ಬಳಿಕ ರೋಗಿಯ ಮುಖದಲ್ಲಿದ್ದ ಆಕ್ಸಿಜನ್​ ಮಾಸ್ಕ್​ಗೆ ಬೆಂಕಿ ತಗುಲಿತು. ಅಲ್ಲದೇ ಈ ಮಾಸ್ಕ್​ ಅವರ ಕುತ್ತಿಗೆಗೂ ಅಂಟಿಕೊಂಡಿತ್ತು ಎಂದು ಮೃತ ವೈಭವ್​ ಕುಟುಂಬಸ್ಥರು ಆರೋಪಿಸಿದ್ದಾರೆ. ಎದೆ ಹಾಗೂ ಮುಖ ಭಾಗದಲ್ಲಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ವೈಭವ್​ ಬಳಿಕ ಮೃತಪಟ್ಟಿದ್ದಾರೆ.

ವೈಭವ್​ ಸಾವನ್ನಪ್ಪಿದ್ದಾರೆ ಎಂದು ತಿಳಿದ ಬಳಿಕ ಕುಟುಂಬಸ್ಥರು ಕೆಲವು ಬಿಜೆಪಿ ಮತ್ತು ಕಾಂಗ್ರೆಸ್​ ಮುಖಂಡರ ಜೊತೆ ಸೇರಿ ಆಸ್ಪತ್ರೆಯ ಹೊರಭಾಗದಲ್ಲಿ ನಾಲ್ಕು ಗಂಟೆಗಳ ಕಾಲ ಧರಣಿ ನಡೆಸಿದ್ರು ಹಾಗೂ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read