Video | ಮತ್ತೊಂದು ಪ್ರೇರಣಾದಾಯಕ ಪೋಸ್ಟ್‌ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ಇವುಗಳ ಪೈಕಿ ಹಲವು ಪ್ರೇರಣಾದಾಯಕವಾಗಿರುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ಶೇರ್​ ಆಗಿದೆ. ಮ್ಯಾನ್‌ಹೋಲ್ ಸುತ್ತಲೂ ಕಾಂಕ್ರೀಟ್ ಹಾಕುವ ವ್ಯಕ್ತಿಯ ವಿಡಿಯೋವನ್ನು ಇವರು ಶೇರ್​ ಮಾಡಿದ್ದಾರೆ.

ಮೂಲತಃ ʼಹೌ ಥಿಂಗ್ಸ್ ವರ್ಕ್ʼ ಎಂಬ ಪುಟದಿಂದ ಪೋಸ್ಟ್ ಮಾಡಲಾಗಿದೆ. 27 ಸೆಕೆಂಡುಗಳ ವಿಡಿಯೋದಲ್ಲಿ, ಮ್ಯಾನ್‌ಹೋಲ್ ಸುತ್ತಲೂ ಒಬ್ಬ ವ್ಯಕ್ತಿ ಕಾಂಕ್ರೀಟ್ ಹಾಕುತ್ತಿರುವುದನ್ನು ಕಾಣಬಹುದು. ಅವರು ತಮ್ಮ ಕೆಲಸದಲ್ಲಿ ಹೆಚ್ಚು ಸಮರ್ಪಿತರಾಗಿದ್ದರು ಮತ್ತು ಎಲ್ಲಾ ಹಂತಗಳನ್ನು ನಿಖರವಾಗಿ ಅನುಸರಿಸಿದರು.

ಆನಂದ್​ ಮಹೀಂದ್ರಾ ಆ ವ್ಯಕ್ತಿಯ ಕೆಲಸದ ಬಗ್ಗೆ ಸಾಕಷ್ಟು ಪ್ರಭಾವಿತರಾಗಿದ್ದಾರೆ. “ನಿಮ್ಮ ಕೆಲಸ ಚಿಕ್ಕದ್ದೇ ಆಗಿರಲಿ, ಅದು ಮುಖ್ಯವಲ್ಲ, ಬದಲಿಗೆ ನಿಮ್ಮ ಕೆಲಸದಲ್ಲಿ ಗುಣಮಟ್ಟಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತೀರಿ ಎನ್ನುವುದು ಮುಖ್ಯ ಎನ್ನುವ ಮೂಲಕ ಈ ಯುವಕನ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ 2 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಟ್ವಿಟ್ಟರ್ ಬಳಕೆದಾರರು ಕೈಗಾರಿಕೋದ್ಯಮಿಯ ಮಾತನ್ನು ಒಪ್ಪಿಕೊಂಡು ಕಮೆಂಟ್​ ಹಾಕುತ್ತಿದ್ದಾರೆ.

https://twitter.com/anandmahindra/status/1619923337182060544?ref_src=twsrc%5Etfw%7Ctwcamp%5Etweetembed%7Ctwterm%5E1619923337182060544%7Ctwgr%5Efb1c9287aaa34772ccd40e93f1334bda8ff021e4%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-covers-manhole-with-concrete-in-viral-video-shared-by-anand-mahindra-your-dose-of-monday-motivation-here-2328123-2023-01-30

https://twitter.com/singlemaltrocks/status/1619931444025135104?ref_src=twsrc%5Etfw%7Ctwcamp%5Etweetembed%7Ctwterm%5E1619931444025135104%7Ctwgr%5Efb1c9287aaa34772ccd40e93f1334bda8ff021e4%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-covers-manhole-with-concrete-in-viral-video-shared-by-anand-mahindra-your-dose-of-monday-motivation-here-2328123-2023-01-30

https://twitter.com/Prabunandhan10/status/1619931025936908289?ref_src=twsrc%5Etfw%7Ctwcamp%5Etweetembed%7Ctwterm%5E1619931025936908289%7Ctwgr%5Efb1c9287aaa34772ccd40e93f1334bda8ff021e4%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-covers-manhole-with-concrete-in-viral-video-shared-by-anand-mahindra-your-dose-of-monday-motivation-here-2328123-2023-01-30

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read