HomeLatest Newsಒಂದು ರೂಪಾಯಿ, ಎರಡು ರೂಪಾಯಿ ಅಲ್ಲ: ಬರೋಬ್ಬರಿ 1.10 ಲಕ್ಷ ರೂಪಾಯಿ ₹10 ನಾಣ್ಯ ನೀಡಿ...

ಒಂದು ರೂಪಾಯಿ, ಎರಡು ರೂಪಾಯಿ ಅಲ್ಲ: ಬರೋಬ್ಬರಿ 1.10 ಲಕ್ಷ ರೂಪಾಯಿ ₹10 ನಾಣ್ಯ ನೀಡಿ ಬೈಕ್ ಖರೀದಿಸಿದ ಭೂಪ ವಿಡಿಯೋ ವೈರಲ್

“ಹನಿ ಹನಿ ಗೂಡಿದರೆ ಹಳ್ಳ” ಎಂಬ ಜನಪ್ರಿಯ ಗಾದೆಗೆ ತೆಲಂಗಾಣದ ಯಾದಾದ್ರಿ-ಭುವನಗಿರಿಯಲ್ಲಿ ರೋಚಕ ಉದಾಹರಣೆಯೊಂದು ಸಿಕ್ಕಿದೆ. ವ್ಯಕ್ತಿಯೊಬ್ಬರು ಹೊಸ ಬೈಕ್ ಕೊಳ್ಳಲು ಬರೋಬ್ಬರಿ ₹1.10 ಲಕ್ಷ ಹಣವನ್ನು ಕೇವಲ 10 ರೂಪಾಯಿಯ ನಾಣ್ಯಗಳ ರೂಪದಲ್ಲೇ ಪಾವತಿಸಿದ್ದಾರೆ ಮೂಟೆಗಟ್ಟಲೆ ನಾಣ್ಯಗಳನ್ನು ಹೊತ್ತು ತಂದ ಗ್ರಾಹಕನನ್ನು ನೋಡಿ ಶೋರೂಂ ಮಾಲೀಕರು ಹಾಗೂ ಸಿಬ್ಬಂದಿ ಒಂದು ಕ್ಷಣ ಅಕ್ಷರಶಃ ಶಾಕ್ ಆಗಿದ್ದಾರೆ.

ಚಿಟ್ಯಾಲ ಮಂಡಲದ ವೆಲಿಮಿನೇಡು ಗ್ರಾಮದ ನಿವಾಸಿ ಕೊಂಡೆ ರಘುಪತಿ ಎಂಬುವವರೇ ಈ ಅಪರೂಪದ ಸಾಧನೆ ಮಾಡಿದ ಗ್ರಾಹಕ. ಅವರು ಚಿಟ್ಯಾಲದ ಶ್ರೀ ವಿನಾಯಕ ಮೋಟಾರ್ಸ್‌ನಿಂದ ಹೀರೊ ಸ್ಪ್ಲೆಂಡರ್ ಪ್ಲಸ್ (Hero Splendor Plus) ಬೈಕ್ ಅನ್ನು ಸಂಪೂರ್ಣವಾಗಿ 10 ರೂ. ನಾಣ್ಯಗಳನ್ನು ನೀಡಿಯೇ ಮನೆಗೆ ಕೊಂಡೊಯ್ದಿದ್ದಾರೆ.

2017 ರಿಂದಲೇ ಶುರುವಾಗಿತ್ತು ನಾಣ್ಯಗಳ ಸಂಗ್ರಹ

ರಘುಪತಿ, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿ ಸ್ವಂತದ್ದೊಂದು ಬೈಕ್ ಖರೀದಿಸಲೇಬೇಕು ಎಂಬ ಹಠದೊಂದಿಗೆ ಕಳೆದ 2017 ರಿಂದಲೇ ಹತ್ತು ರೂಪಾಯಿ ನಾಣ್ಯಗಳನ್ನು ಕೂಡಿಡಲು ಆರಂಭಿಸಿದ್ದರು. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹತ್ತು ರೂಪಾಯಿ ನಾಣ್ಯಗಳು ಬ್ಯಾನ್ ಆಗಿವೆ, ಚಲಾವಣೆಯಲ್ಲಿಲ್ಲ ಎಂಬ ಭಾರಿ ವದಂತಿಗಳು ಹರಡಿದ್ದರೂ ಸಹ, ಈ ಕುಟುಂಬ ಅದಾವುದಕ್ಕೂ ತಲೆಕೆಡಿಸಿಕೊಳ್ಳದೆ ಶಿಸ್ತುಬದ್ಧವಾಗಿ ನಾಣ್ಯಗಳನ್ನು ಉಳಿತಾಯ ಮಾಡುತ್ತಲೇ ಬಂದಿತ್ತು. ಕೊನೆಗೂ ಅವರ ವರ್ಷಗಳ ಪರಿಶ್ರಮಕ್ಕೆ ಭರ್ಜರಿ ಫಲ ಸಿಕ್ಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಣ್ಯ ಎಣಿಸಲು ಶೋರೂಂ ಸಿಬ್ಬಂದಿಗೆ ಬೇಕಾಯಿತು 4 ಗಂಟೆ

ರಘುಪತಿ ಅವರು ಬೈಕ್ ಖರೀದಿಸುವ ಮುನ್ನವೇ ಶೋರೂಂ ಮಾಲೀಕರಾದ ಉಪ್ಪು ಮಧು ಅವರಿಗೆ ತಾನು ನಾಣ್ಯಗಳ ಮೂಲಕ ಹಣ ಪಾವತಿಸುವುದಾಗಿ ತಿಳಿಸಿದ್ದರು. ಮಾಲೀಕರು ಇದಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ ಪ್ಲಾಸ್ಟಿಕ್ ಚೀಲಗಳಲ್ಲಿ ಮೂಟೆಗಟ್ಟಲೆ ನಾಣ್ಯಗಳನ್ನು ತಂದು ಶೋರೂಂನ ನೆಲದ ಮೇಲೆ ಸುರಿಯಲಾಯಿತು.

ಈ ಅಪರೂಪದ ದೃಶ್ಯವನ್ನು ನೋಡಲು ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕೊನೆಗೆ ಶೋರೂಂನ ಐದು ಜನ ಸಿಬ್ಬಂದಿಗಳು ಸತತ ನಾಲ್ಕು ಗಂಟೆಗಳ ಕಾಲ ಕುಳಿತು ಪ್ರತಿಯೊಂದು ನಾಣ್ಯವನ್ನು ಎಣಿಸಿ, ಒಟ್ಟು ₹1.10 ಲಕ್ಷ ಮೊತ್ತವನ್ನು ಖಚಿತಪಡಿಸಿಕೊಂಡರು. ಬಳಿಕ ಅತ್ಯಂತ ಸಂತೋಷದಿಂದ ರಘುಪತಿ ಕುಟುಂಬಕ್ಕೆ ಬೈಕ್ ಕೀಲಿಯನ್ನು ಹಸ್ತಾಂತರಿಸಿದರು.

ಇದೇ ರೀತಿಯ ಘಟನೆ ಛತ್ತೀಸ್‌ಗಢದಲ್ಲೂ ನಡೆದಿತ್ತು: ಕಳೆದ 2025ರ ಅಕ್ಟೋಬರ್ ತಿಂಗಳಿನಲ್ಲಿ ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯ ರೈತರೊಬ್ಬರು ತಾವು ಆರು ತಿಂಗಳಿನಿಂದ ಉಳಿತಾಯ ಮಾಡಿದ್ದ ₹40,000 ಮೌಲ್ಯದ ನಾಣ್ಯಗಳನ್ನು ನೀಡಿ ತಮ್ಮ ಮಗಳಿಗೆ ಸ್ಕೂಟರ್ ಕೊಡಿಸಿ ಸುದ್ದಿಯಾಗಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular