ಮತಾಂತರಕ್ಕೆ ಬಲವಂತ; ಯುವಕನ ವಿರುದ್ಧ ಕೇಸ್

19 ವರ್ಷದ ಯುವತಿಯನ್ನು ಇಸ್ಲಾಂ ಗೆ ಮತಾಂತರವಾಗುವಂತೆ ಬಲವಂತಪಡಿಸುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಯುವತಿಯ ತಾಯಿ ಈ ಕುರಿತಂತೆ ಉತ್ತರ ಪ್ರದೇಶದ ಬಾರಾಬಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಮ್ಮ ಮಗಳನ್ನು ಅಪಹರಿಸಿದ್ದ ನೆರೆಮನೆಯ ನಿವಾಸಿ ವಯಾಜ್ ಮಹಮ್ಮದ್ ಮತಾಂತರವಾಗುವಂತೆ ಬಲವಂತಪಡಿಸಿದ್ದಾನೆ ಎಂದು ಆರೋಪಿಸಿದ್ದರು.

ನವೆಂಬರ್ 2022 ರಲ್ಲಿ ಈ ಯುವತಿ ನಾಪತ್ತೆಯಾಗಿದ್ದು ಹೈದರ್ ಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶನಿವಾರದಂದು ಲಕ್ನೋ – ಬಾರಾಬಂಕಿ ಗಡಿಯಲ್ಲಿ ಯುವತಿಯನ್ನು ಪತ್ತೆ ಹಚ್ಚಿರುವ ಪೊಲೀಸರು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read