HomeCrimeಮ್ಯಾಟ್ರಿಮೋನಿಯಲ್ಲಿ ಪರಿಚಯ; ವಿದ್ಯಾರ್ಥಿಗೆ ಕೆಲಸ ಕೊಡುವುದಾಗಿ ಹೇಳಿ 31 ಲಕ್ಷ ರೂಪಾಯಿ ವಂಚನೆ.....!

ಮ್ಯಾಟ್ರಿಮೋನಿಯಲ್ಲಿ ಪರಿಚಯ; ವಿದ್ಯಾರ್ಥಿಗೆ ಕೆಲಸ ಕೊಡುವುದಾಗಿ ಹೇಳಿ 31 ಲಕ್ಷ ರೂಪಾಯಿ ವಂಚನೆ…..!

ಮಂಡ್ಯ: ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ವ್ಯಕ್ತಿ ವ್ಯದ್ಯಾರ್ಥಿನಿಯೊಬ್ಬರಿಗೆ 31 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.

ಲಿಂಗಾಯಿತ ಮ್ಯಾಟ್ರಿಮೋನಿಯಲ್ಲಿ ಹಾಕಲಾಗಿದ್ದ ಪ್ರೊಫೈಲ್ ಡೀಟೇಲ್ ತೆಗೆದುಕೊಂಡು ವ್ಯಕ್ತಿಯೊಬ್ಬ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡುವುದಾಗಿ ಹೇಳಿ ನಂಬಿಸಿ ವಿದ್ಯಾರ್ಥಿನಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಬಿದರಕೋಟೆ ಗ್ರಾಮದ ವಿದ್ಯಾರ್ಥಿನಿಗೆ ಪರಿಚಯಯವಾದ ವ್ಯಕ್ತಿ ಮಧು, ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಕೆಲಸ ಕೊಡುವುದಾಗಿ ಹೇಳಿ ವಿದ್ಯಾರ್ಥಿನಿಯಿದ 31 ಲಕ್ಷದ 34 ಸಾವಿರದ 300 ರೂಪಾಯಿ ವಂಚಿಸಿದ್ದಾನೆ. ವಿದ್ಯಾರ್ಥಿನಿ ಮಂಡ್ಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ಮಧುವನ್ನು ಬಂಧಿಸಿದ್ದಾರೆ.

ಆರೋಪಿ ವಿಚಾರಣೆಯ ವೇಳೆ ಆತ ಮಂಡ್ಯ, ಮೈಸೂರು, ಕೆ.ಆರ್.ನಗರ, ಕಾಟನ್ ಪೇಟೆ, ಹರಿಹರದಲ್ಲಿ ಕೆಲಸ ಕೊಡುವುದಾಗಿ ವಂಚಿಸಿರುವುದು ಬೆಳಕಿಗೆ ಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular