ಪುರುಷ ಮತ್ತು ಮಹಿಳೆಯೊಬ್ಬರು ರಸ್ತೆ ಮಧ್ಯದಲ್ಲಿ ಸ್ಕೂಟಿ ಚಲಾಯಿಸುತ್ತಾ ಸ್ನಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ ಉಲ್ಹಾಸ್‌ನಗರದಲ್ಲಿ ನಡೆದ ವಿಲಕ್ಷಣ ಘಟನೆ ನಡೆದಿದೆ,
ಭಾರತದ ಹಲವಾರು ಭಾಗಗಳಲ್ಲಿ ತಾಪಮಾನ ಏರಿಕೆಯ ನಡುವೆ ಈ ವಿಡಿಯೋ ಕಾಣಿಸಿಕೊಂಡಿದೆ. ಇದು ಆನ್‌ಲೈನ್‌ನಲ್ಲಿ ಸಾಕಷ್ಟು ವೈರಲ್ ಆಗಿದ್ದು, ದಂಪತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಉಲ್ಲಾಸ್‌ನಗರದ ಸೆಕ್ಟರ್ 17 ಮುಖ್ಯ ಸಿಗ್ನಲ್‌ನಲ್ಲಿ ಘಟನೆ ನಡೆದಿದೆ. ಪುರುಷ ಮತ್ತು ಮಹಿಳೆ ರಸ್ತೆಯ ಮಧ್ಯದಲ್ಲಿ ಸ್ಕೂಟಿ ಚಲಾಯಿಸುತ್ತಾ ಸ್ನಾನ ಮಾಡುತ್ತಿರುವುದನ್ನು ಕಾಣಬಹುದು. ಮಹಿಳೆ ತನ್ನ ಮುಂದೆ ಬಕೆಟ್ ಹೊಂದಿದ್ದಳು. ಇತರ ಪ್ರಯಾಣಿಕರು ನೋಡುತ್ತಿದ್ದಂತೆ ಪುರುಷ ವ್ಯಕ್ತಿ ಮತ್ತು ತನ್ನ ಮೇಲೆ ನೀರು ಸುರಿಯುತ್ತಾ ಸಾಗಿದ್ದಾಳೆ.
ಮನರಂಜನೆಯ ಹೆಸರಿನಲ್ಲಿ ಇಂತಹ ಅಸಂಬದ್ಧತೆಗೆ ಅವಕಾಶವಿದೆಯೇ? ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಇನ್ನು ಥಾಣೆ ಪೊಲೀಸರ ಗಮನಕ್ಕೆ ಈ ವಿಡಿಯೋ ಬಂದಿದ್ದು, ಅಗತ್ಯ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.
https://twitter.com/ItsAamAadmi/status/1658000635789479937?ref_src=twsrc%5Etfw%7Ctwcamp%5Etweetembed%7Ctwterm%5E1658000635789479937%7Ctwgr%5Edbcda8bb7a90e6364291500481f503aea2595c5b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-and-woman-take-bath-while-riding-scooty-in-viral-video-thane-city-police-reacts-2381027-2023-05-18
https://twitter.com/ThaneCityPolice/status/1658006405578620931?ref_src=twsrc%5Etfw%7Ctwcamp%5Etweetembed%7Ctwterm%5E1658006405578620931%7Ctwgr%5Edbcda8bb7a90e6364291500481f503aea2595c5b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-and-woman-take-bath-while-riding-scooty-in-viral-video-thane-city-police-reacts-2381027-2023-05-18