HomeInternationalಓವನ್ ನಲ್ಲಿ ಊಟ ಬಿಸಿ ಮಾಡಿದ್ದಕ್ಕೆ ಕೆಲಸವನ್ನೇ ಕಳೆದುಕೊಂಡ ಉದ್ಯೋಗಿ...!

ಓವನ್ ನಲ್ಲಿ ಊಟ ಬಿಸಿ ಮಾಡಿದ್ದಕ್ಕೆ ಕೆಲಸವನ್ನೇ ಕಳೆದುಕೊಂಡ ಉದ್ಯೋಗಿ…!

ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸಗಾರರನ್ನು ವಜಾ ಮಾಡುವ ಸುದ್ದಿಗಳು ಇತ್ತಿಚೆಗೆ ಹೆಚ್ಚಾಗಿವೆ. ಇದಕ್ಕೆ ಕಾರಣ ರಿಸೆಶನ್, ಆರ್ಥಿಕ ಹಿಂಜರಿತ ಕಾರಣ ಕೊಟ್ಟು ಸಾವಿರಾರು ಜನರನ್ನ ಕೆಲಸದಿಂದ ತೆಗೆಯಲಾಗುತ್ತಿದೆ. ಕಂಪನಿಗಳ ಈ ಕ್ರಮದಿಂದಾಗಿ ಎಷ್ಟೋ ಜನರು ಬೀದಿಗೆ ಬಂದಿದ್ದಾರೆ. ಈಗ ಬರಿಸ್ತಾ ಕಂಪನಿಯ ಸ್ಟಾರ್ ಬಕ್ಸ್ ನಲ್ಲಿ ಕೆಲಸ ಮಾಡುತಿದ್ದ ವ್ಯಕಿಯೊಬ್ಬನನ್ನ ಕೆಲಸದಿಂದ ತೆಗೆದಿದೆ. ಇದಕ್ಕೆ ಕಾರಣ ಏನಂತ ಗೊತ್ತಾದೆ ನೀವು ಶಾಕ್ ಆಗಿ ಬಿಡ್ತಿರಾ.

ತನಗಾದ ಕಹಿ ಅನುಭವವನ್ನ ಈ ವ್ಯಕ್ತಿ ತನ್ನ @fugnarr ಅನ್ನೋ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾನೆ ಮತ್ತು ಅದಕ್ಕೆ “ಗುಡ್ ಬೈ ಸ್ಟಾರ್ ಬಕ್ಸ್, ಕೆಲಸಕ್ಕೆ ಬರಕೂಡದು ಎಂಬ ಸೂಚನೆ’ ಎಂದು ಶೀರ್ಷಿಕೆ ಕೊಡಲಾಗಿದೆ. ಅಸಲಿಗೆ ಈ ವ್ಯಕ್ತಿ ತನ್ನ ಲಂಚ್ ಬ್ರೇಕ್ ಸಮಯದಲ್ಲಿ, ತಾನು ತಂದಿದ್ದ ಊಟವನ್ನ ಅಲ್ಲೇ ಇದ್ದ ಕಂಪನಿಯ ಓವನ್‌ನಲ್ಲಿ ಬಿಸಿ ಮಾಡಿಕೊಳ್ಳುತ್ತಾನೆ. ಆತ ಮಾಡಿದ್ದು ಅದೇ ತಪ್ಪು. ಕಂಪನಿಯ ಓವನ್ ಬಳಸಿಕೊಂಡಿದ್ದಾನೆ ಅನ್ನೋ ಕಾರಣಕ್ಕೆ ಆತನನ್ನು ಕೆಲಸದಿಂದ ತೆಗೆಯಲಾಗಿದೆ. ಜೊತೆಗೆ ಈ ಕ್ರಮಕ್ಕಾಗಿ ಕ್ಷಮೆಯನ್ನ ಕೂಡಾ ಕೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೋಶಿಯಲ್ ಮಿಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ತಮಗೂ ಕೂಡಾ ಇದೇ ರೀತಿ ಆದ ಕಹಿ ಅನುಭವವನ್ನ ಕಾಮೆಂಟ್‌ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು, ಈ ವ್ಯಕ್ತಿಗೆ ಸಮಾಧಾನ ಮಾಡಿದ್ದಾರೆ. ಹಾಗೆಯೇ ಕೆಲ ಸಲಹೆಗಳನ್ನು ಕೂಡಾ ಕೊಟ್ಟಿದ್ದಾರೆ.

ಒಬ್ಬರು, ನಾನು ಕೂಡಾ ಈ ಹಿಂದೆ ಸ್ಮಾರ್‌ಬಕ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೆ. ನನಗೂ ಕೂಡಾ ಕ್ಷುಲ್ಲಕ ಕಾರಣಕ್ಕೆ ಕೆಲಸದಿಂದ ತೆಗೆದಿದ್ದರು’ ಎಂದು ಹೇಳಿದ್ದಾರೆ. ಇನ್ನೊಬ್ಬರು “ಈ ಸಮಯದಲ್ಲಿ ಧೈರ್ಯದಿಂದ ಇರಿ” ಎಂದು ಹೇಳಿದ್ದಾರೆ. ‘ದೊಡ್ಡ ದೊಡ್ಡ ಕಂಪನಿಗಳಲ್ಲಿ ಮನುಷ್ಯರ ಕಷ್ಟಗಳಿಗೆ ಬೆಲೆ ಇಲ್ಲ’ ಎಂದು ಮಗದೊಬ್ಬರು ಹೇಳಿದ್ದಾರೆ.

https://www.youtube.com/watch?v=D10dn_PNzkM

For Latest News Updates, Join Our Whatsapp Community🚩
RELATED ARTICLES

Most Popular