HomeIndiaರಸ್ತೆಯಲ್ಲೇ 12 ಬಾರಿ ಚೂರಿಯಿಂದ ಇರಿದು ಬಾಲಕಿ ಬರ್ಬರವಾಗಿ ಕೊಂದ ಎಸಿ ಮೆಕಾನಿಕ್ ಅರೆಸ್ಟ್

ರಸ್ತೆಯಲ್ಲೇ 12 ಬಾರಿ ಚೂರಿಯಿಂದ ಇರಿದು ಬಾಲಕಿ ಬರ್ಬರವಾಗಿ ಕೊಂದ ಎಸಿ ಮೆಕಾನಿಕ್ ಅರೆಸ್ಟ್

ನವದೆಹಲಿ: ದೆಹಲಿ ಹೊರ ವಲಯದ ಶಹಬಾದ್ ಡೇರಿಯಲ್ಲಿ 16 ವರ್ಷದ ಬಾಲಕಿಯನ್ನು ಕನಿಷ್ಠ 12 ಬಾರಿ ಇರಿದು ಕೊಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಾರ್ವಜನಿಕರ ಎದುರಲ್ಲೇ ಗೆಳೆಯ ಬಾಲಕಿಯನ್ನು ಕೊಂದ ಒಂದು ದಿನದ ನಂತರ ದೆಹಲಿ ಪೊಲೀಸರು 20 ವರ್ಷದ ಎಸಿ ರಿಪೇರಿ ಮೆಕ್ಯಾನಿಕ್ ಸಾಹಿಲ್ ನನ್ನು ಬಂಧಿಸಿದ್ದಾರೆ. .

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಲಕಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಾಹಿಲ್ ಇದ್ದಕ್ಕಿದ್ದಂತೆ ಅವಳನ್ನು ಅಡ್ಡಗಟ್ಟಿ ಚಾಕುವಿನಿಂದ ಪದೇ ಪದೇ ಇರಿದು ಕಲ್ಲಿನಿಂದ ಆಕೆಯ ತಲೆಗೆ ಹೊಡೆದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಹಿಲ್ ಮತ್ತು ಮೃತ ಬಾಲಕಿ ಸಂಬಂಧದಲ್ಲಿದ್ದರು. ಆದರೆ, ನಿನ್ನೆ ಅವರು ಜಗಳವಾಡಿದ್ದರು. ಭಾನುವಾರ, ಮೃತ ಬಾಲಕಿ ತನ್ನ ಸ್ನೇಹಿತೆ ನೀತು ಅವರ ಮಗನ ಹುಟ್ಟುಹಬ್ಬಕ್ಕೆ ಹಾಜರಾಗಲು ಹೊರಟಿದ್ದ ವೇಳೆ ಆರೋಪಿ ಸಾಹಿಲ್ ಆಕೆಯನ್ನು ಅಡ್ಡಗಟ್ಟಿ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular