HomeIndiaನಾಯಿಮರಿಯೊಂದಿಗೆ ಟ್ರೆಡ್ ಮಿಲ್ ಮೇಲೆ ದೀದಿ ವಾಕ್...! ವಿಡಿಯೋ ವೈರಲ್

ನಾಯಿಮರಿಯೊಂದಿಗೆ ಟ್ರೆಡ್ ಮಿಲ್ ಮೇಲೆ ದೀದಿ ವಾಕ್…! ವಿಡಿಯೋ ವೈರಲ್

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಾಯಿಮರಿಯನ್ನು ಹಿಡಿದುಕೊಂಡು ಟ್ರೆಡ್‌ಮಿಲ್‌ನಲ್ಲಿ ನಡೆಯುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಕೆಲವೊಮ್ಮೆ ನಿಮಗೆ ಕೆಲವು ಹೆಚ್ಚುವರಿ ಪ್ರೇರಣೆ ಅಗತ್ಯವಿರುತ್ತದೆ ಎಂದು ಶೀರ್ಷಿಕೆ ನೀಡಿ ಈ ಫೋಟೋವನ್ನು ಮಮತಾ ಬ್ಯಾನರ್ಜಿ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬ್ಯಾನರ್ಜಿ ಅವರು, ತಮ್ಮ ಬಿಳಿ ಸೀರೆಯಲ್ಲಿ ಟ್ರೆಡ್‌ಮಿಲ್‌ನಲ್ಲಿ ನಡೆಯುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಕಂದು ಬಣ್ಣದ ನಾಯಿಮರಿಯನ್ನು ಹಿಡಿದು ಟ್ರೆಡ್ ಮಿಲ್ ನಲ್ಲಿ ನಡೆದಿದ್ದಾರೆ. ನಾಯಿಮರಿಯನ್ನು ನೋಡುತ್ತಾ ಅವರು ನಡೆದಿದ್ದಾರೆ.

ಮಮತಾ ಬ್ಯಾನರ್ಜಿ ಅವರು ವ್ಯಾಯಾಮ ಮಾಡುವುದರಲ್ಲಿ ಸದಾ ಮುಂದು. 2019 ರಲ್ಲಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಡಾರ್ಜಿಲಿಂಗ್‌ನಲ್ಲಿ 10 ಕಿಲೋಮೀಟರ್ ಉದ್ದದ ಜಾಗಿಂಗ್ ಸಹ ಮಾಡಿದ್ದರು.

68 ವರ್ಷ ವಯಸ್ಸಿನ ಮಮತಾ ಬ್ಯಾನರ್ಜಿ, ಐದು ದಶಕಗಳಿಂದ ರಾಜಕಾರಣದಲ್ಲಿ ಸಕ್ರಿಯರಾಗಿದ್ದು, ಬಿಜೆಪಿಗೆ ತೀವ್ರ ಎದುರಾಳಿಯಾಗಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಧಃಪತನ ಪ್ರಾರಂಭವಾದರೆ ಸಂತೋಷವಾಗುತ್ತದೆ ಎಂದು ಅವರು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular