HomeEntertainmentಅಭಿಮಾನಿಯ ವರ್ತನೆಯಿಂದ ಮುಜುಗರಕ್ಕೊಳಗಾದ್ರಾ ಮಲೈಕಾ ? ನಟಿಯ ವಿಡಿಯೋ ವೈರಲ್

ಅಭಿಮಾನಿಯ ವರ್ತನೆಯಿಂದ ಮುಜುಗರಕ್ಕೊಳಗಾದ್ರಾ ಮಲೈಕಾ ? ನಟಿಯ ವಿಡಿಯೋ ವೈರಲ್

ಬಾಲಿವುಡ್ ನಟಿ ಮಲೈಕಾ ಅರೋರ ಇಂಟರ್ನೆಟ್ ನಲ್ಲಿ ಸುದ್ದಿಯಲ್ಲಿರುತ್ತಾರೆ. ತಮ್ಮ ಫ್ಯಾಷನ್ ಮತ್ತು ಯೋಗ ತರಬೇತಿಗೆ ಹಾಜರಾಗುವ ವೇಳೆ ಆಗಾಗ್ಗೆ ಸುದ್ದಿಯಲ್ಲಿ ಮುಖ್ಯಾಂಶವಾಗ್ತಾರೆ. ಇಂಟರ್ನೆಟ್ ನಲ್ಲಿ ಕ್ರಿಯಾಶೀಲರಾಗಿರುವ ಅವರನ್ನ ಅಪಾರ ಅಭಿಮಾನಿಗಳು ಅವರು ಹೋದಲೆಲ್ಲಾ ಅನುಸರಿಸುತ್ತಾರೆ.

ಕಳೆದ ಸೋಮವಾರ ಮಧ್ಯಾಹ್ನ ಅವರು ಡ್ಯಾನ್ಸ್ ಶೋ ʼಜಲಕ್ ದಿಖ್ಲಾ ಜಾʼ ಸೀಸನ್ 11 ರ ಸೆಟ್‌ ಹೊರಗೆ ಕೆಂಪು ಸೀರೆಯಲ್ಲಿ ಕಾಣಿಸಿಕೊಂಡರು. ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿರುವಾಗ ಅವರ ಬಳಿ ಬಂದ ಅಭಿಮಾನಿಯ ನಡೆಯಿಂದ ಮಲೈಕಾ ಮುಜುಗರ ಅನುಭವಿಸಿದರಾ ಎಂಬ ಚರ್ಚೆ ಎದ್ದಿದೆ. ಕೆಲವರು ಮಲೈಕಾ ನಡೆಯನ್ನ ಶ್ಲಾಘಿಸಿದರೆ, ಕೆಲವರು ಅಭಿಮಾನಿಯ ವರ್ತನೆ ಬಗ್ಗೆ ಟೀಕಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಸಲಿಗೆ ಡ್ಯಾನ್ಸ್ ಶೋ ಸೆಟ್ ಹೊರಗೆ ಕಾಣಿಸಿಕೊಂಡ ಮಲೈಕಾ ಅರೋರ ಜೊತೆ ಫೋಟೋ ತೆಗೆಸಿಕೊಳ್ಳಲು ಸರಿಯಾಗಿ ನಡೆಯಲಾಗದ ವಿಶೇಷಚೇತನ ಅಭಿಮಾನಿಯೊಬ್ಬರು ಮುಂದಾದರು. ಅವರನ್ನ ಸಮಾಧಾನದಿಂದ ಹತ್ತಿರ ಕರೆದ ಮಲೈಕಾ ಅವರೊಂದಿಗೆ ಫೋಟೋಗೆ ಪೋಸ್ ನೀಡಿದರು.

ಆದರೆ ಈ ವೇಳೆ ವಿಶೇಷಚೇತನ ಅಭಿಮಾನಿ ನಟಿಯ ಬೆನ್ನಿನ ಕೆಳಭಾಗವನ್ನು ಸ್ಪರ್ಶಿಸಿದಂತೆ ಕಂಡರು. ಇದರಿಂದ ಮಲೈಕಾ ಮುಜುಗರಕ್ಕೊಳಗಾದರು ಎಂದು ವಿಡಿಯೋ ನೋಡಿದ ಕೆಲವರು ಹೇಳಿದ್ರೆ, ಹಲವರು ವಿಶೇಷ ಚೇತನ ಸರಿಯಾಗಿ ನಿಲ್ಲಲಾಗದೇ ನಟಿಯ ಬೆನ್ನಿನ ಕೆಳಗೆ ಕೈಹಾಕಿದ್ದಾರಷ್ಟೇ. ಎಲ್ಲವನ್ನೂ ಕೆಟ್ಟ ದೃಷ್ಟಿಯಲ್ಲಿ ನೋಡಬೇಡಿ ಎಂದಿದ್ದಾರೆ. ವಿಶೇಷ ಚೇತನ ಅಭಿಮಾನಿಯ ಜೊತೆ ಫೋಟೋ ತೆಗೆಸಿಕೊಂಡ ಮಲೈಕಾ ನಡೆಯನ್ನು ಹಲವರು ಕೊಂಡಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular