HomeRecipiesಮನೆಯಲ್ಲಿಯೇ ಸುಲಭವಾಗಿ ಮಾಡಿ ‘ಗ್ರೀನ್ ಚಿಲ್ಲಿ ಸಾಸ್’

ಮನೆಯಲ್ಲಿಯೇ ಸುಲಭವಾಗಿ ಮಾಡಿ ‘ಗ್ರೀನ್ ಚಿಲ್ಲಿ ಸಾಸ್’

ಸಂಜೆ ಟೀ ಸಮಯಕ್ಕೆ ಏನಾದರೂ ಡೀಪ್ ಫ್ರೈ ಮಾಡಿದ ಸ್ನ್ಯಾಕ್ಸ್ ಮಾಡಿಕೊಂಡು ಸವಿಯಬೇಕು ಅನಿಸುತ್ತದೆ. ಈ ಸ್ನ್ಯಾಕ್ಸ್ ಜತೆ ನಂಚಿಕೊಳ್ಳಲು ಸಾಸ್ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ಗ್ರೀನ್ ಚಿಲ್ಲಿ ಸಾಸ್ ಮಾಡಿ. ಮಾಡುವ ವಿಧಾನ ಕೂಡ ತುಂಬಾ ಸುಲಭ.

ಬೇಕಾಗುವ ಸಾಮಗ್ರಿಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಸಿಮೆಣಸು – 15 , 1 ಟೇಬಲ್ ಸ್ಪೂನ್ ಎಣ್ಣೆ, ಶುಂಠಿ – 1 ಇಂಚು, ½ ಕಪ್ – ವಿನೇಗರ್, ಲವಂಗ – 3, ಉಪ್ಪು – 1ಟೀ ಸ್ಪೂನ್, ¼ ಕಪ್ – ನೀರು, ಇನ್ನು ಒಗ್ಗರಣೆಗೆ – 2 ಟೇಬಲ್ ಸ್ಪೂನ್ ಎಣ್ಣೆ, ಚಿಟಿಕೆ – ಇಂಗು, ಜೀರಿಗೆ ಪುಡಿ – 1/4 ಟೀ ಸ್ಪೂನ್, ಧನಿಯಾ ಪುಡಿ – 1/2 ಟೀ ಸ್ಪೂನ್, ಸಕ್ಕರೆ – 1 ಟೀ ಸ್ಪೂನ್.

ಮಾಡುವ ವಿಧಾನ:

ಮೊದಲಿಗೆ ಒಂದು ಪ್ಯಾನ್ ಗೆ 1 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಲವಂಗ, ಶುಂಠಿ ಹಾಕಿ 5 ನಿಮಿಷಗಳ ಕಾಲ ಹುರಿದುಕೊಳ್ಳಿ, ಇದಕ್ಕೆ ಸೀಳಿಕೊಂಡ ಹಸಿಮೆಣಸು ಹಾಕಿ ಜತೆಗೆ ಉಪ್ಪು ಸೇರಿಸಿ 4 ನಿಮಿಷಗಳ ಕಾಲ ಮಿಕ್ಸ್ ಮಾಡಿ ಇದಕ್ಕೆ ನೀರು ಹಾಕಿ ಒಂದು ತಟ್ಟೆ ಮುಚ್ಚಿ 10 ನಿಮಿಷಗಳ ಕಾಲ ಹದ ಉರಿಯಲ್ಲಿ ಬೇಯಿಸಿ. ಮೆಣಸು ಬೆಂದ ನಂತರ ಗ್ಯಾಸ್ ಆಫ್ ಮಾಡಿ. ಇದು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ಇದಕ್ಕೆ ½ ಕಪ್ ವಿನೇಗರ್ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಚಿಟಿಕೆ ಇಂಗು ಹಾಕಿ. ನಂತರ ರುಬ್ಬಿಕೊಂಡ ಮಿಶ್ರಣ ಸೇರಿಸಿ 3 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಜೀರಿಗೆ ಪುಡಿ, ಧನಿಯಾ ಪುಡಿ. ಸಕ್ಕರೆ ಹಾಕಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ತಣ್ಣಗಾದ ಮೇಲೆ ಒಂದು ಗಾಜಿನ ಡಬ್ಬಕ್ಕೆ ತುಂಬಿಸಿಕೊಂಡು ಫ್ರಿಡ್ಜ್ ನಲ್ಲಿಟ್ಟು ಉಪಯೋಗಿಸಿ.

For Latest News Updates, Join Our Whatsapp Community🚩
RELATED ARTICLES

Most Popular