HomeRecipiesಮನೆಯಲ್ಲೇ ಸುಲಭವಾಗಿ ಮಾಡಿ ಸವಿಯಿರಿ ಟೇಸ್ಟಿಯಾದ ʼಜೀರಾʼ ಬಿಸ್ಕೇಟ್

ಮನೆಯಲ್ಲೇ ಸುಲಭವಾಗಿ ಮಾಡಿ ಸವಿಯಿರಿ ಟೇಸ್ಟಿಯಾದ ʼಜೀರಾʼ ಬಿಸ್ಕೇಟ್

ಸಂಜೆ ಸಮಯದಲ್ಲಿ ಏನಾದರೂ ಸ್ನ್ಯಾಕ್ಸ್ ತಿನ್ನಬೇಕು ಎಂಬ ಆಸೆ ಆಗುತ್ತದೆ. ಸುಲಭವಾಗಿ ಮನೆಯಲ್ಲಿಯೇ ಜೀರಾ ಬಿಸ್ಕೇಟ್ ಮಾಡಿಕೊಂಡು ಸವಿಯಿರಿ.

100 ಗ್ರಾಂ ಬೆಣ್ಣೆ, 50 ಗ್ರಾಂ ಐಸ್ಸಿಂಗ್ ಸಕ್ಕರೆ, ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣದ ಹದ ಬೆಣ್ಣೆಯಂತೆ ಆಗಲಿ. ನಂತರ ಇದಕ್ಕೆ ½ ಟೀ ಸ್ಪೂನ್ ಉಪ್ಪು, 1 ಟೇಬಲ್ ಸ್ಪೂನ್ ಜೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ½ ಟೀ ಸ್ಪೂನ್ ಬೇಕಿಂಗ್ ಪೌಡರ್ ಹಾಕಿ. ನಂತರ 150 ಗ್ರಾಂ ಮೈದಾ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ಸ್ವಲ್ಪ ದಪ್ಪಕ್ಕೆ ಲಟ್ಟಿಸಿಕೊಳ್ಳಿ.

ನಂತರ ಇದನ್ನು ವೃತ್ತಾಕಾರದಲ್ಲಿ ಕಟ್ ಮಾಡಿಕೊಳ್ಳಿ. ಇದನ್ನು ½ ಗಂಟೆಗಳ ಕಾಲ ಫ್ರೀಜರ್ ನಲ್ಲಿಡಿ. ನಂತರ ಒಂದು ಅಲ್ಯುಮಿನಿಯಂ ಪಾತ್ರೆಯ ತಳಭಾಗಕ್ಕೆ ಪುಡಿ ಉಪ್ಪು ಹಾಕಿ ಒಂದು ಚಿಕ್ಕ ಪ್ಲೇಟ್ ಅದರ ತಳಭಾಗಕ್ಕೆ ಬಿಡಿ. ನಂತರ ಫ್ರೀಜರ್ ನಲ್ಲಿದ್ದ ಈ ಬಿಸ್ಕೆಟ್ ಅನ್ನು ಫ್ರೀ ಹಿಟ್ ಮಾಡಿಟ್ಟುಕೊಂಡಿದ್ದ ಅಲ್ಯುಮಿನಿಯಂ ಪಾತ್ರೆಯ ಮೇಲೆ ಇಟ್ಟು ಒಂದು ಪ್ಲೇಟ್ ಮುಚ್ಚಿ 20 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ರುಚಿಕರವಾದ ಜೀರಾ ಬಿಸ್ಕೇಟ್ ಈಗ ರೆಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular