HomeLatest Newsಮಾಡಿ ಸವಿಯಿರಿ ರುಚಿ ರುಚಿ ‘ಕಸ್ಟರ್ಡ್ ಪೌಡರ್ ಹಲ್ವಾ'

ಮಾಡಿ ಸವಿಯಿರಿ ರುಚಿ ರುಚಿ ‘ಕಸ್ಟರ್ಡ್ ಪೌಡರ್ ಹಲ್ವಾ’

ಹಲ್ವಾ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಈಗ ಎಲ್ಲರೂ ಮನೆಯಲ್ಲಿಯೇ ಇರುವುದರಿಂದ ಏನಾದರೂ ಮಾಡಿಕೊಂಡು ತಿನ್ನಬೇಕು ಅನಿಸುವುದು ಸಹಜ. ಹಾಗಿದ್ದರೆ ತಡವೇಕೆ ಸುಲಭವಾಗಿ ಈ ಕಸ್ಟರ್ಡ್ ಹಲ್ವಾ ಮಾಡಿ ಸವಿಯಿರಿ.

ಒಂದು ಬೌಲ್ ಗೆ 1 ಕಪ್ ವೆನಿಲ್ಲಾ ಕಸ್ಟರ್ಡ್ ಪುಡಿ ಹಾಕಿ ಅದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಮಿಶ್ರಣ ಮಾಡಿಕೊಳ್ಳಿ. 2 ಕಪ್ ಸಕ್ಕರೆಯನ್ನು ಒಂದು ಪ್ಯಾನ್ ಗೆ ಹಾಕಿ ಅದಕ್ಕೆ 2 ಕಪ್ ನೀರು ಹಾಕಿ ಸಕ್ಕರೆ ಕರಗುವವರಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಸಕ್ಕರೆ ಕರಗಿದ ಮೇಲೆ ಗ್ಯಾಸ್ ಉರಿ ಕಡಿಮೆ ಮಾಡಿಕೊಳ್ಳಿ. ನಂತರ ಇದಕ್ಕೆ ಕಸ್ಟರ್ಡ್ ಮಿಶ್ರಣವನ್ನು ನಿಧಾನಕ್ಕೆ ಹಾಕಿ ಚೆನ್ನಾಗಿ ಕೈಯಾಡಿಸುತ್ತಾ ಇರಿ. ತಳ ಹತ್ತದಂತೆ ಎಚ್ಚರ ವಹಿಸಿ. ಈ ಮಿಶ್ರಣವನ್ನು 15 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ. ಇದು ಸ್ವಲ್ಪ ದಪ್ಪಗಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ½ ಕಪ್ ತುಪ್ಪ ತೆಗೆದಿಟ್ಟುಕೊಳ್ಳಿ. ಇದಕ್ಕೆ 2 ಚಮಚ ತುಪ್ಪ ಹಾಕಿ ಕೈಯಾಡಿಸಿ. ಹೀಗೆ ಸ್ವಲ್ಪ ಸ್ವಲ್ಪ ತುಪ್ಪ ಸೇರಿಸಿ ಕೈಯಾಡಿಸುತ್ತಾ ಹಲ್ವಾ ಹದಕ್ಕೆ ಬರುವವರೆಗೆ ಕೈಯಾಡಿಸುತ್ತಾ ಇರಿ. ನಂತರ ಇದಕ್ಕೆ ½ ಚಮಚ ಏಲಕ್ಕಿ ಪುಡಿ, 2 ಟೇಬಲ್ ಸ್ಪೂನ್ ಗೋಡಂಬಿ ಚೂರುಗಳನ್ನು ಹಾಕಿ. ನಂತರ ಒಂದು ಪ್ಲೇಟ್ ಗೆ ತುಪ್ಪ ಸವರಿ ಈ ಹಲ್ವಾ ಮಿಶ್ರಣವನ್ನು ಹಾಕಿ. ನಂತರ ಸ್ವಲ್ಪ ಹೊತ್ತು ಬಿಟ್ಟು ಕತ್ತರಿಸಿಕೊಳ್ಳಿ.

For Latest News Updates, Join Our Whatsapp Community🚩
RELATED ARTICLES

Most Popular