ಮನೆಯಲ್ಲೇ ಮಾಡಿ ಸವಿಯಿರಿ ತಂಪು ತಂಪು ‘ಫ್ರೂಟ್ ಕಸ್ಟರ್ಡ್’

ಬೇಸಿಗೆಯಲ್ಲಿ ತಣ್ಣಗೆ ಏನಾದರೂ ಕುಡಿದರೆ ಸಾಕಪ್ಪಾ ಅನ್ನುವಷ್ಟು ದಾಹವಾಗಿರುತ್ತದೆ. ತಂಪು ತಂಪಾಗಿ ಹಾಲಿನಿಂದ ಮಾಡುವ ಫ್ರೂಟ್ ಕಸ್ಟರ್ಡ್ ಒಂದು ಸರಿ ಟ್ರೈ ಮಾಡಲೇಬೇಕು. ಇದನ್ನು ಒಂದು ಬಾರಿ ತಯಾರಿಸಿದರೆ ಒಂದು ವಾರಗಳ ಕಾಲ ಫ್ರಿಡ್ಜ್ ನಲ್ಲಿಟ್ಟು ಕೂಲ್ ಆಗಿ ಸವಿಯಬಹುದು.

ಬೇಕಾಗುವ ಸಾಮಾಗ್ರಿಗಳು

ಹಾಲು – ಅರ್ಧ ಲೀಟರ್

ಕಸ್ಟರ್ಡ್ ಪೌಡರ್ – 2 ಸ್ಪೂನ್

ಸಕ್ಕರೆ – 5 ಸ್ಪೂನ್

ಹೆಚ್ಚಿದ ಕಲ್ಲಂಗಡಿ ಹಣ್ಣು ಸ್ವಲ್ಪ

ಹೆಚ್ಚಿದ ಬಾಳೆಹಣ್ಣು ಸ್ವಲ್ಪ

ಹೆಚ್ಚಿದ ಸೇಬು ಸ್ವಲ್ಪ

ಹೆಚ್ಚಿದ ಪಪ್ಪಾಯಿ ಸ್ವಲ್ಪ

ಕಪ್ಪು ದ್ರಾಕ್ಷಿ ಸ್ವಲ್ಪ

ದಾಳಿಂಬೆ ಸ್ವಲ್ಪ

ಮಾಡುವ ವಿಧಾನ :

ಒಂದು ಕಪ್ ಹಾಲಿಗೆ ಎರಡು ಸ್ಪೂನ್ ಕಸ್ಟರ್ಡ್ ಪೌಡರ್ ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿಕೊಳ್ಳಬೇಕು. ಉಳಿದ ಹಾಲನ್ನು ಕಾಯಲು ಬಿಡಬೇಕು. ಕಾದ ಹಾಲಿಗೆ 5 ಸ್ಪೂನ್ ಸಕ್ಕರೆ ಹಾಕಬೇಕು. ಕೆನೆ ಬರದಂತೆ ಕೈ ಆಡಿಸುತ್ತಲೇ ಇರಿ. ನಂತರ ತಯಾರಿಸಿಕೊಂಡ ಮಿಶ್ರಣವನ್ನು ಕುದಿಯುತ್ತಿರುವ ಹಾಲಿಗೆ ಹಾಕಬೇಕು. ಹಾಲು ಗಟ್ಟಿಯಾಗುವವರೆಗೂ ಸಿಮ್ ನಲ್ಲಿ ಇಟ್ಟು ಕುದಿಯಲು ಬಿಡಬೇಕು. ಒಂದು ಉಕ್ಕಿನ ನಂತರ ಗ್ಯಾಸ್ ಆಫ್ ಮಾಡಿ ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು.

ತಣ್ಣಗಾದ ಮಿಶ್ರಣವನ್ನು ಬೇರೆ ಬೌಲ್ ಗೆ ಸುರಿದು ಹೆಚ್ಚಿದ ಕಲ್ಲಂಗಡಿ, ಬಾಳೆಹಣ್ಣು, ಸೇಬು, ಪಪ್ಪಾಯಿ ಹಾಗೂ ಕಪ್ಪು ದ್ರಾಕ್ಷಿ, ದಾಳಿಂಬೆಯನ್ನು ಹಾಕಿ ಚೆನ್ನಾಗಿ ಸ್ಪೂನ್ ನ ಸಹಾಯದಿಂದ ಕಲಸಿ. ಬಳಿಕ 2 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಟ್ಟು ನಂತರ ಟೇಸ್ಟ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read