ಬೀನ್ಸ್ ಆರೋಗ್ಯಕ್ಕೆ ಒಳ್ಳೆಯದು. ಬೀನ್ಸ್ ತರಕಾರಿಯನ್ನು ಮತ್ತಷ್ಟು ರುಚಿಕರವಾಗಿ ಸವಿಯುವ ವಿಧಾನವಿದೆ. ಪಲ್ಯ, ಸಾಂಬಾರಿಗಿಂತ ಇದು ತುಂಬಾ ರುಚಿಯಾಗಿರುತ್ತದೆ. ಕೇವಲ ರೋಸ್ಟ್ ಮಾಡಿದ್ರೆ ಸಾಕು. ಹಾಗಾದರೆ ಬೀನ್ಸ್ ರೋಸ್ಟ್ ಮಾಡುವ ರೆಸಿಪಿ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು
ಬೀನ್ಸ್ 1/2 ಕೆಜಿ
ಎಣ್ಣೆ 2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಚಿಕ್ಕ ಈರುಳ್ಳಿ 3
ಕಾಳು ಮೆಣಸಿನ ಪುಡಿ ಸ್ವಲ್ಪ
ಮಾಡುವ ವಿಧಾನ
ಬೀನ್ಸ್ ನಾರು ತೆಗೆದು ತೊಳೆಯಿರಿ. ಈರುಳ್ಳಿಯನ್ನು ಉದ್ದುದ್ದವಾಗಿ, ತೆಳುವಾಗಿ ಕತ್ತರಿಸಿಕೊಳ್ಳಿ.
ಈಗ ಪ್ಯಾನ್‌ಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಬೀನ್ಸ್ ಹಾಕಿ, ಸ್ವಲ್ಪ ಉಪ್ಪು ಉದುರಿಸಿ.
ಸಾಧಾರಣ ಉರಿಯಲ್ಲಿ ರೋಸ್ಟ್ ಮಾಡಿ. ಬೀನ್ಸ್ ಬೆಂದ ಮೇಲೆ ಕಾಳು ಮೆಣಸಿನ ಪುಡಿ ಉದುರಿಸಿ ಮಿಕ್ಸ್ ಮಾಡಿ ಸವಿಯಲು ನೀಡಿ.