HomeLatest Newsಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿ ದರ್ಶನ: ಕಣ್ತುಂಬಿಕೊಂಡ ಅಯ್ಯಪ್ಪ ಸ್ವಾಮಿ ಭಕ್ತಸಾಗರ

ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿ ದರ್ಶನ: ಕಣ್ತುಂಬಿಕೊಂಡ ಅಯ್ಯಪ್ಪ ಸ್ವಾಮಿ ಭಕ್ತಸಾಗರ

ತಿರುವನಂತಪುರಂ: ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವಾಗಿದ್ದು, ಅಯ್ಯಪ್ಪ ಸ್ವಾಮಿ ಭಕ್ತರು ಕಣ್ತುಂಬಿಕೊಂಡಿದ್ದಾರೆ.

ಕೇರಳದ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿ ಗೋಚರಿಸಿದೆ. ಕತ್ತಲಾಗುತ್ತಿದ್ದಂತೆ ಬೆಟ್ಟದಲ್ಲಿ ಜ್ಯೋತಿ ಸ್ವರೂಪದಲ್ಲಿ ಮಣಿಕಂಠ ಗೋಚರಿಸಿದ್ದು, ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡ ಅಯ್ಯಪ್ಪ ಸ್ವಾಮಿ ಭಕ್ತರು ಭಾವಪರವಶರಾಗಿದ್ದಾರೆ.

ಪಂದಳದಿಂದ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಆಭರಣ ತಂದು ದೇವಾಲಯದಲ್ಲಿ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಗಿದೆ. ಗರುಡ ದರ್ಶನವಾಗಿದ್ದು, ಇದರ ಜೊತೆಗೆ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿ ದರ್ಶನವಾಗಿದೆ. ಅಪಾರ ಸಂಖ್ಯೆಯ ಭಕ್ತರು ದರ್ಶನ ಪಡೆದು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಘೋಷಣೆ ಕೂಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಿರುವಾಭರಣದಿಂದ ಅಲಂಕೃತವಾದ ಅಯ್ಯಪ್ಪ ದೇವರ ಮೂರ್ತಿಯ ದೀಪಾರಾಧನೆಯ ನಂತರ ಶಬರಿಮಲೆ ದೇವಸ್ಥಾನದ ಗರ್ಭಗುಡಿಯನ್ನು ಸಂಜೆ 6:40 ಕ್ಕೆ ತೆರೆಯಲಾಯಿತು. ಸಂಜೆ 6:41ಕ್ಕೆ ಪೊನ್ನಂಬಲಮೇಡುವಿನಲ್ಲಿ ಬಹುನಿರೀಕ್ಷಿತ ಮಕರ ಜ್ಯೋತಿ ದರ್ಶನವಾಯಿತು. ಮಂಡಲ ಮಕರವಿಳಕ್ಕು ಉತ್ಸವದ ಪರಾಕಾಷ್ಠೆಯನ್ನು ಸೂಚಿಸುವ ಪವಿತ್ರ ಬೆಳಕು ಮೂರು ಬಾರಿ ಕಾಣಿಸಿಕೊಂಡಿತು. ಸಾವಿರಾರು ಅಯ್ಯಪ್ಪ ಭಕ್ತರು ಜ್ಯೋತಿಯ ದರ್ಶನ ಪಡೆದು “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂದು ಮೊಳಗಿಸಿದ ಘೋಷಣೆ ಮುಗಿಲು ಮುಟ್ಟಿತ್ತು.

https://www.instagram.com/reels/DTfmvZ5EzYv

For embed: https://www.instagram.com/reel/DTfmvZ5EzYv/?igsh=ZnRyN3BzMXBybXo3

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular