ಕ್ರಿಕೆಟಿಗ ಪೃಥ್ವಿ ಶಾ ಮೇಲಿನ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನಮ್ಮ ಮೇಲೆಯೇ ದೌರ್ಜನ್ಯವೆಸಗಲಾಗಿದೆ ಎಂದ ಯುವತಿ

ಮುಂಬೈನ ಪಬ್ ಒಂದರ ಮುಂದೆ ಸೆಲ್ಫಿ ಕೇಳಿಕೊಂಡು ಬಂದ ಅಭಿಮಾನಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದ ಕ್ರಿಕೆಟಿಗ ಪೃಥ್ವಿ ಶಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರೋಪ ಹೊತ್ತಿದ್ದ ಯುವತಿ ಪೃಥ್ವಿ ಶಾ ನಮ್ಮ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಶೋಭಿತ್ ಠಾಕೂರ್ ಎಂಬಾತ ತನ್ನ ಗೆಳತಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಪ್ನಾ ಗಿಲ್ ಮತ್ತಿತರ ಸ್ನೇಹಿತರ ಜೊತೆಗೆ ಪಬ್ ಗೆ ಹೋಗಿದ್ದು ಈ ಸಂದರ್ಭದಲ್ಲಿ ಪೃಥ್ವಿ ಶಾ ಹಾಗೂ ಅವರ ಗೆಳೆಯರು ಎದುರಾಗಿದ್ದಾರೆ.

ಈ ಸಂದರ್ಭದಲ್ಲಿ ವಿಡಿಯೋ ಮಾಡಿಕೊಳ್ಳಲು ಹೋದ ವೇಳೆ, ಪೃಥ್ವಿ ಶಾ ಹಾಗೂ ಆತನ ಸ್ನೇಹಿತರು ನಮ್ಮ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂದು ಇವರುಗಳು ಹೇಳಿಕೊಂಡಿದ್ದಾರೆ. ನಾನು ರಸ್ತೆಯಲ್ಲೇ ನನ್ನ ಕತ್ತನ್ನು ಕೊಯ್ದುಕೊಳ್ಳುತ್ತೇನೆ ಎಂದು ಸಪ್ನಾ ಗಿಲ್ ಗೆಳೆಯ ಹೇಳುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

https://youtu.be/e9e7fq3A5_I

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read