BIG NEWS: ನನ್ನ ಹೇಳಿಕೆ ಇಡೀ ವಿಧಾನಸಭೆಯನ್ನು ಗಡಗಡ ನಡುಗಿಸಿದೆ: ಶಾಸಕ ಹರೀಶ್ ಪೂಂಜಾ ಹೇಳಿಕೆ ಉಲ್ಲೇಖಿಸಿ ನಾನು ಹೇಳಿದ್ದು ಎಂದ ಮಹೇಶ್ ತಿಮರೋಡಿ

ಮಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಕೊಲೆ ಆರೋಪ ಮಾಡಿರುವ ಮಹೇಶ್ ತಿಮರೋಡ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ. ಮಹೇಶ್ ತಿಮರೋಡಿ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಪರಮೇಶ್ವರ್ ಸೂಚನೆ ವಿಚಾರವಾಗಿ ಸ್ವತಃ ಮಹೇಶ್ ತಿಮರೋಡಿ ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ ತಿಮರೋಡಿ, ನನ್ನ ಹೇಳಿಕೆ ಇಂದು ಇಡೀ ವಿಧಾನಸಭೆಯನ್ನು ಗಡಗಡ ನಡುಗಿಸಿದೆ. ಅಂದರೆ ಒಳ್ಳೆಯ ವಿಚಾರವೇ. ಅಂದು ನಾನು ಕೊಟ್ಟ ಹೇಳಿಕೆ ಇಂದು ಚರ್ಚೆಯಾಗಿದೆ ಎಂದು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಕೊಲೆ ಮಾಡಿದ್ದಾರೆ ಎಂದು ನಾನು ಹೇಳಿಲ್ಲ. ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದು ಶಾಸಕ ಹರೀಶ್ ಪೂಂಜಾ. ಅವರ ಹೇಳಿಕೆ ಉಲ್ಲೇಖಿಸಿ ನಾನು ಅಂದು ಹೇಳಿದ್ದೆ. ಶಾಸಕ ಹರೀಶ್ ಪೂಂಜಾ ಹೇಳಿಕೆಅನ್ನು ನಾನು ಪ್ರಶ್ನೆ ಮಾಡಿದ್ದೇನೆ. ನನ್ನ ಹೇಳಿಕೆ ಇವರಿಗೆ ಅರ್ಥವಾಗಿಲ್ಲ ಅಷ್ಟೇ. ಹರೀಶ್ ಪೂಂಜಾ ಹೀಗೆ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರೇ ಉತ್ತರ ಕೊಡಿ. ಇಲ್ಲವೇ ಹರೀಶ್ ಪೂಂಜಾ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಾನು ಹೇಳಿದ್ದು. ನನ್ನ ಹೇಳಿಕೆಯನ್ನು ಸಂಪೂರ್ಣವಾಗಿ ಕೇಳಿ ಮಾತನಾಡಿ ಎಂದಿದ್ದಾರೆ.

ಅವತ್ತು ನಾನು ನೀಡಿದ್ದ ಹೇಳಿಕೆಗೆ ಈಗ ಕ್ರಮ ಕೈಗೊಳ್ಳಲು ಸೂಚಿಸುತ್ತಿದ್ದಾರೆ. ಇಷ್ಟು ದಿನ ಏನು ಮಾಡುತ್ತಿದ್ದರು? ಶಾಸಕರು ಈ ರೀತಿ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಉತ್ತರಿಸಬೇಕಿರುವ ಸಿದ್ದರಾಮಯ್ಯನವರು ಮೌನವಾಗಿರುವುದೇಕೆ? ಎಂದು ನಾನು ಪ್ರಶ್ನಿಸಿದ್ದು. ಇಂದಿನವರೆಗೆ ಈ ಬಗ್ಗೆ ಉತ್ತರ ನೀಡಲು ಇವರಿಂದ ಸಾಧ್ಯವಾಗಿಲ್ಲ. ಈಗ ಅಂದು ನಾನು, ಶಾಸಕರು ನೀಡಿದ ಹೇಳಿಕೆ ಉಲ್ಲೇಖಿಸಿ ಮಾತನಾಡಿದ್ದಕ್ಕೆ ಈಗ ನನ್ನ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ಶಾಸಕರ ವಿರುದ್ಧ ಯಾಕೆ ಕ್ರಮವಿಲ್ಲ? ನಾನು ಹೇಳಲು ಹೊರಟರೆ ಇನ್ನು ಸಾಕಷ್ಟು ಇದೆ ಎಂದು ಕಿಡಿಕಾರಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read