ವಿಜಯಪುರ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಜಾಗರಣೆಗೆ ಹೋಗಿದ್ದವರ ಮನೆಗಳನ್ನೇ ಟಾರ್ಗೆಟ್ ಮಾಡಿದ್ದ ಕಳ್ಳರ ಗ್ಯಾಂಗ್ ಮನೆಗಳಿಗೆ ನುಗ್ಗಿ ಚಿನ್ನಾಭರನ ದೋಚಿ ಪರಾರಿಯಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಶಾರದಾ ನಗರದಲ್ಲಿ ಮನೆಗಳ್ಳತನ ನಡೆದಿದೆ. ಶಿವರಾತ್ರಿ ಜಾಗರಣೆಗೆಂದು ಹೋಗಿದ್ದ ವೇಳೆ ಸೋಮಶೇಖರ್ ಗಣಿ ಎಂಬುವವರ ಮನೆ ಕಳ್ಳತನಾವೊಗಿದೆ. ಮನೆಯಲ್ಲಿದ್ದ 40 ಸಾವಿರ ನಗದು, 154 ಗ್ರಾಂ ಚಿನ್ನಾಭರಣ, 270 ಗ್ರಾಅಂ ಬೆಳ್ಳಿ ಕದ್ದು ಪರಾರಿಯಾಗಿದ್ದಾರೆ.
ಶಿವರಾತ್ರಿ ಹಿನ್ನೆಲೆಯಲ್ಲಿ ಸೋಮಶೇಖರ್ ಗಣಿ ಕುಟುಂಬ ಮನೆಗೆ ಬೀಗಹಾಅಕಿ ಶಿವಗಿರಿಗೆ ತೆರಳಿದ್ದರು. ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಇದ್ದ ಕಾರಣಕ್ಕೆ ಬೀದಿಯಲ್ಲಿಯೂ ಜನರಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಮನೆಗೆ ನುಗ್ಗಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಕುಟುಂಬದವರು ಮನೆಗೆ ಬಂದು ನೋಡಿದಾಗಲೇ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಗೋಲಗುಂಬಜ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

