HomeIndiaಮಕ್ಕಳು ಆಟವಾಡುವಾಗ ಸಿಕ್ಕ ಸೂಟ್ ಕೇಸ್ ತೆರೆದಾಗ ಶಾಕ್: ಸೂಟ್ ಕೇಸ್ ನಲ್ಲಿ ಪತ್ತೆಯಾಯ್ತು ಮಹಿಳೆಯ...

ಮಕ್ಕಳು ಆಟವಾಡುವಾಗ ಸಿಕ್ಕ ಸೂಟ್ ಕೇಸ್ ತೆರೆದಾಗ ಶಾಕ್: ಸೂಟ್ ಕೇಸ್ ನಲ್ಲಿ ಪತ್ತೆಯಾಯ್ತು ಮಹಿಳೆಯ ರುಂಡ

ಮಕ್ಕಳು ಆಟವಾಡುವಾಗ ಸಿಕ್ಕ ಸೂಟ್ ಕೇಸ್ ವೊಂದರಲ್ಲಿ ಮಹಿಳೆಯ ರುಂಡ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ವಿರಾರ್ ಪ್ರದೇಶದಲ್ಲಿ ನಡೆದಿದೆ.

ವಿರಾರ್ ಪ್ರದೇಶದ ಪಿರ್ಕುಂದ ದರ್ಗಾ ಬಳಿ ಮಕ್ಕಳು ಆಟವಾಡುತ್ತಿದ್ದಾಗ ಸೂಟ್ ಕೇಸ್ ವೊಂದು ಪತ್ತೆಯಾಗಿದ್ದು, ಈ ವೇಳೆ ಮಕ್ಕಳು ಸೂಟ್ ಕೇಸ್ ತೆರೆದು ನೋಡಿದ್ದಾರೆ. ಅದರಲ್ಲಿ ಮಹಿಳೆಯ ಕತ್ತರಿಸಿದ ತಲೆ ಪತ್ತೆಯಾಗಿದೆ. ಈ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧವೈಸಿದ ಪಾಲ್ಘರ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಹಿಳೆ ಗುರುತು ಪತ್ತೆಯಾಗಿಲ್ಲ. ತನಿಖೆ ಮುಂದುವರೆಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular