HomeLatest NewsBIG NEWS: ಮಹಾ ಮಳೆ: ಸಿದ್ಧಾರ್ಥ್ ಗಾರ್ಡನ್ ಬಳಿ ಪ್ರವೇಶದ್ವಾರ ಕುಸಿದುಬಿದ್ದು ಮೂವರು ದುರ್ಮರಣ

BIG NEWS: ಮಹಾ ಮಳೆ: ಸಿದ್ಧಾರ್ಥ್ ಗಾರ್ಡನ್ ಬಳಿ ಪ್ರವೇಶದ್ವಾರ ಕುಸಿದುಬಿದ್ದು ಮೂವರು ದುರ್ಮರಣ

ಮುಂಬೈ: ಮಹಾರಾಷ್ಟ್ರದಾದ್ಯಂತ ವರುಣಾರ್ಭಟ ಜೊರಾಗಿದ್ದು, ಸಂಭಾಜಿ ನಗರದಲ್ಲಿ ದುರಂತ ಸಂಭವಿಸಿದೆ. ಬಿರುಗಳಿ ಮಳೆಯಿಂದಾಗಿ ಸಿದ್ಧಾರ್ಥ್ ಗಾರ್ಡನ್ ಬಳಿಯ ಪ್ರವೇಶದ್ವಾರ ಕುಸಿದು ಬಿದ್ದು ಮೂವರು ಸಾವನ್ನಪ್ಪಿದ್ದಾರೆ.

ದುರಂತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವೇಶದ್ವಾರದ ಗೇಟ್ ಬಳಿ ನಿಂತಿದ್ದ ವೇಳೆ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತರ ಕುಟುಂಬಕ್ಕೆ ಪುರಸಭೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular