Shocking: ಸೋಶಿಯಲ್ ಮೀಡಿಯಾದಲ್ಲಿ ಪರಿಚಿತನಾದವನಿಂದ ಅಪ್ರಾಪ್ತೆ ಗರ್ಭಿಣಿ; ಯೂಟ್ಯೂಬ್ ನೋಡಿ ಮಗು ಹೆತ್ತ ಬಳಿಕ ಹತ್ಯೆ

ಮಹಾರಾಷ್ಟ್ರದಲ್ಲೊಂದು ಆಘಾತಕಾರಿ ಘಟನೆ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪರಿಚಿತನಾದ ರಮೇಶ್ ಠಾಕೂರ್ ಎಂಬಾತನೊಂದಿಗೆ ಸಂಬಂಧ ಬೆಳೆಸಿದ 15 ವರ್ಷದ ಬಾಲಕಿ ಗರ್ಭಿಣಿಯಾಗಿದ್ದಾಳೆ. ಬಳಿಕ ಯೂಟ್ಯೂಬ್ ನೋಡಿ ಮಗು ಹೆತ್ತು ನಂತರ ಹತ್ಯೆ ಮಾಡಿದ್ದಾಳೆ.

ನಾಗ್ಪುರದಲ್ಲಿ ಈ ಘಟನೆ ನಡೆದಿದ್ದು, ರಮೇಶ್ ಠಾಕೂರ್ ಜೊತೆಗೆ ಚಾಟ್ ಆರಂಭಿಸಿದ ಬಾಲಕಿ ಬಳಿಕ ಆತನನ್ನು ಭೇಟಿಯಾಗಿದ್ದಾಳೆ. ಇಬ್ಬರು ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದು, ದೈಹಿಕ ಸಂಬಂಧವನ್ನೂ ಬೆಳೆಸಿದ್ದಾರೆ. ಇದರ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು, ಆದರೆ ಹೆತ್ತವರಿಗೆ ತಿಳಿಯದಂತೆ ವಿಷಯವನ್ನು ಮುಚ್ಚಿಟ್ಟಿದ್ದಾಳೆ.

ಆಕೆಯ ದೇಹದಲ್ಲಿ ಆಗುತ್ತಿದ್ದ ಬದಲಾವಣೆಯನ್ನು ಗಮನಿಸಿದ ತಾಯಿ ಹಲವು ಬಾರಿ ಪ್ರಶ್ನಿಸಿದ್ದರೂ ಹಾರಿಕೆಯ ಉತ್ತರ ನೀಡಿದ್ದಳು. ಮಾರ್ಚ್ ಮೂರರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಯೂಟ್ಯೂಬ್ ನೋಡಿ ಮಗು ಹೆತ್ತಿದ್ದಾಳೆ.

ಬಳಿಕ ಯಾರಿಗೂ ತಿಳಿಯಬಾರದೆಂಬ ಕಾರಣಕ್ಕೆ ನವಜಾತ ಶಿಶುವನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದು, ಕವರ್ ಒಂದರಲ್ಲಿ ಹಾಕಿ ಮನೆಯಲ್ಲಿಯೇ ಇಟ್ಟಿದ್ದಳು. ಬಳಿಕ ತಾಯಿ ಆಗಮಿಸಿದ್ದು, ಅಷ್ಟರಲ್ಲಾಗಲೇ ಬಾಲಕಿಯ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಅನಿವಾರ್ಯವಾಗಿ ಎಲ್ಲ ವಿಷಯವನ್ನು ತಾಯಿಗೆ ತಿಳಿಸಿದ್ದು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಪೊಲೀಸರು ಆರೋಪಿ ರಮೇಶ್ ಠಾಕೂರ್ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read