HomeInternationalBREAKING : ಬೆಳ್ಳಂ ಬೆಳಗ್ಗೆ ಚೀನಾದಲ್ಲಿ 5.4 ತೀವ್ರತೆಯ ಪ್ರಬಲ ಭೂಕಂಪ : 21 ಮಂದಿಗೆ...

BREAKING : ಬೆಳ್ಳಂ ಬೆಳಗ್ಗೆ ಚೀನಾದಲ್ಲಿ 5.4 ತೀವ್ರತೆಯ ಪ್ರಬಲ ಭೂಕಂಪ : 21 ಮಂದಿಗೆ ಗಂಭೀರ ಗಾಯ

ಭಾನುವಾರ ಬೆಳ್ಳಂ ಬೆಳಗ್ಗೆ ಚೀನಾದಲ್ಲಿ 5.4 ತೀವ್ರತೆಯ ಪ್ರಬಲ ಭೂಕಂಪವಾಗಿದ್ದು, 21 ಮಂದಿಗೆ ಗಂಭೀರ ಗಾಯಗಳಾಗಿದೆ.

ಪೂರ್ವ ಚೀನಾದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 21 ಜನರು ಗಾಯಗೊಂಡಿದ್ದಾರೆ ಮತ್ತು ಹಲವಾರು ಕಟ್ಟಡಗಳು ಕುಸಿದಿವೆ.ಸೋಷಿಯಲ್ ಮೀಡಿಯಾ ವೀಡಿಯೊ ವೈರಲ್ ಆಗಿದ್ದು, ನಡುಗುವ ನೆಲ ಮತ್ತು ಕುಸಿಯುತ್ತಿರುವ ಮನೆಗಳಿಂದ ಜನರುಪಲಾಯನ ಮಾಡುತ್ತಿದ್ದಾರೆ. ಸಿ ಪ್ರಾಂತ್ಯದ ಡೆಝೌನಿಂದ ದಕ್ಷಿಣಕ್ಕೆ 26 ಕಿಲೋಮೀಟರ್ (16 ಮೈಲಿ) ದೂರದಲ್ಲಿ ಮುಂಜಾನೆ 2:33 ಕ್ಕೆ (1833 ಜಿಎಂಟಿ ಶನಿವಾರ) ಭೂಕಂಪ ಸಂಭವಿಸಿದ್ದು, ಸುಮಾರು 10 ಕಿಲೋಮೀಟರ್ ಆಳವನ್ನು ತಲುಪಿದೆ ಎಂದು ವರದಿಯಾಗಿದೆ.

ಹಿಂದಿನ ಭೂಕಂಪದ ದತ್ತಾಂಶದ ಆಧಾರದ ಮೇಲೆ, ಭೂಕಂಪಗಳ ಪರಿಣಾಮದ ಬಗ್ಗೆ ಪ್ರಾಥಮಿಕ ಅಂದಾಜುಗಳನ್ನು ನೀಡುವ USGS’s PAGER ವ್ಯವಸ್ಥೆಯು ರೆಡ್ ಅಲರ್ಟ್ ನೀಡಿದ್ದು, ಗಣನೀಯ ಹಾನಿ ಮತ್ತು ಹಲವಾರು ಸಾವುನೋವುಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಸೂಚಿಸಿದೆ. ಶಾಂಡೊಂಗ್ ಅಧಿಕಾರಿಗಳ ಪ್ರಕಾರ, ಭೂಕಂಪದ ಪರಿಣಾಮವಾಗಿ ಕನಿಷ್ಠ 21 ಜನರು ಗಾಯಗೊಂಡಿದ್ದಾರೆ ಮತ್ತು 126 ಮನೆಗಳು ಅಥವಾ ಕಟ್ಟಡಗಳು ಕುಸಿದಿವೆ. ರಕ್ಷಣಾ ಕಾರ್ಯಾಚರಣೆಗಾಗಿ ಶಾಂಡೊಂಗ್ ಪ್ರಾಂತ್ಯಕ್ಕೆ ತಂಡವನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular