ಮದುವೆಯಾದ ಮೂರೇ ದಿನಕ್ಕೆ ವಧು ಮಾಡಿದ ಕೆಲಸ ಕಂಡು ಬೆಚ್ಚಿಬಿದ್ದ ವರ….!

ಮಧ್ಯಪ್ರದೇಶದ ನಿಮೂಚ್ ಜಿಲ್ಲೆಯಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಮೂರು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ವಧು ಪತಿಗೆ ಕೈ ಕೊಟ್ಟು ಪರಾರಿಯಾಗಿದ್ದಾಳೆ. ಆಕೆ ಮತ್ತವಳ ಕುಟುಂಬ ವರನಿಗೆ 3 ಲಕ್ಷ ರೂಪಾಯಿಗಳಿಗೆ ಪಂಗನಾಮ ಹಾಕಿದೆ.

ಪ್ರಹ್ಲಾದ್ ಧಖಡ್ ಎಂಬಾತ ಮದುವೆಯಾಗಲು ಬಯಸಿದ್ದು, ಎರಡು ತಿಂಗಳ ಹಿಂದೆ ರಾಜಗಡ ಜಿಲ್ಲೆಯ ನಿವಾಸಿಗಳಾದ ನಾರಾಯಣ ಸಿಂಗ್ ಹಾಗೂ ಆತನ ಅಳಿಯ ಗಜರಾಜ್ ಸಿಂಗ್ 25 ವರ್ಷದ ಸರಿತಾ ಎಂಬಾಕೆಯನ್ನು ಪರಿಚಯ ಮಾಡಿಕೊಟ್ಟಿದ್ದರು.

ಆಕೆ ದೇವಾಸ್ ಜಿಲ್ಲೆಯ ನಿವಾಸಿಯಾಗಿದ್ದು, ಪರಸ್ಪರ ಮೆಚ್ಚಿಕೊಂಡ ಬಳಿಕ ಇವರಿಬ್ಬರ ವಿವಾಹಕ್ಕೆ ಆಕೆಯ ತಂದೆ ಬಾಬು ಪಾಟೀಲ್ ಹಾಗೂ ಸಹೋದರ ರಾಕೇಶ್ ಭಯ್ಯಾ ಒಪ್ಪಿಕೊಂಡಿದ್ದರು. ಹೀಗಾಗಿ ಇತ್ತೀಚೆಗಷ್ಟೇ ಇಬ್ಬರ ಮದುವೆ ನಡೆದಿತ್ತು.

ಇದರ ಮಧ್ಯೆ ವಧುವಿನ ತಂದೆ ಖರ್ಚಿನ ನೆಪ ಹೇಳಿ ಮೂರು ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದು, ಪ್ರಹ್ಲಾದ್ ತನ್ನ ಜಮೀನನ್ನು ಮಾರಾಟ ಮಾಡಿ ಅವರುಗಳಿಗೆ ಹಣ ನೀಡಿದ್ದ.

ವಿವಾಹವಾದ ಮೂರು ದಿನಗಳ ಬಳಿಕ ತನ್ನ ಸಹೋದರನ ಬಳಿ ಹೋಗಬೇಕೆಂದು ಸರಿತಾ ಹೇಳಿದ್ದು, ಅದರಂತೆ ಕರೆದುಕೊಂಡ ಹೋದ ವೇಳೆ ಆಕೆ ವಾಪಸ್ ಬಂದಿಲ್ಲ. ತಾನು ಮೋಸ ಹೋಗಿರುವುದನ್ನು ಅರಿತ ಪ್ರಹ್ಲಾದ್ ಈಗ ಪೊಲೀಸರಿಗೆ ದೂರು ನೀಡಿದ್ದಾನೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read