ಮೊರೆನಾ: ಸಾಲವನ್ನು ಮರುಪಾವತಿಸಲು ವಿಫಲರಾದ ಹಿನ್ನೆಲೆಯಲ್ಲಿ ಕೆಲವರು ಭಾನುವಾರ ಬೆಳಿಗ್ಗೆ ಪವನ್ ಶರ್ಮಾ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಶರ್ಮಾ ಅವರು ಮಧ್ಯಪ್ರದೇಶದ ಲಾಲೋರ್‌ಕಲನ್ ಗ್ರಾಮದ ನಿವಾಸಿ. ಕಲ್ಲು ದಂಡೋಟಿಯ ಬಗೀರಾ ಎನ್ನುವವರಿಂದ ಸಾಲ ಪಡೆದಿದ್ದರು. ಅದನ್ನು ವಾಪಸ್ ನೀಡಲು ವಿಫಲರಾದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ದೊಣ್ಣೆಗಳಿಂದ ಹೊಡೆದಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ಮೊರೆನಾ ಜಿಲ್ಲೆಯ ನಂದೇಪುರ ಛೇದಕದಲ್ಲಿ ಈ ಘಟನೆ ನಡೆದಿದೆ. ಈ ಗಲಾಟೆ ನಡೆಯುತ್ತಿದ್ದರೂ ಜನರು ಮಧ್ಯ ಪ್ರವೇಶಿಸಲಿಲ್ಲ. ಬದಲಿಗೆ ಇದನ್ನು ತಮ್ಮ ಫೋನ್ ಕ್ಯಾಮೆರಾಗಳಲ್ಲಿ ಚಿತ್ರೀಕರಿಸಿದರು.
ಜನಸಂದಣಿಯಿಂದ ಚಿತ್ರೀಕರಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
1.40 ಲಕ್ಷ ರೂಪಾಯಿ ಸಾಲ ಪಡೆದಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
https://twitter.com/FreePressMP/status/1627255965975449600?ref_src=twsrc%5Etfw%7Ctwcamp%5Etweetembed%7Ctwterm%5E1627255965975449600%7Ctwgr%5Eb5936bb072da68e5517b70fb1d23fb5330fa459c%7Ctwcon%5Es1_&ref_url=https%3A%2F%2Fwww.freepressjournal.in%2Fbhopal%2Fmadhya-pradesh-locals-drag-man-on-road-beat-him-with-sticks-over-loan-issue-dramatic-fight-video-goes-viral