HomeIndiaSHOCKING: ಅತ್ಯಾಚಾರ ಎಸಗಿ ಯುವತಿಗೆ ಚಿತ್ರಹಿಂಸೆ: ಕಣ್ಣು, ಬಾಯಿಗೆ ಖಾರದ ಪುಡಿ ತುಂಬಿ ಗಮ್ ಹಚ್ಚಿದ...

SHOCKING: ಅತ್ಯಾಚಾರ ಎಸಗಿ ಯುವತಿಗೆ ಚಿತ್ರಹಿಂಸೆ: ಕಣ್ಣು, ಬಾಯಿಗೆ ಖಾರದ ಪುಡಿ ತುಂಬಿ ಗಮ್ ಹಚ್ಚಿದ ದುಷ್ಕರ್ಮಿ

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ 23 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿ ಚಿತ್ರ ಹಿಂಸೆ ನೀಡಲಾಗಿದೆ. ಆಕೆಯ ನೆರೆ ಮನೆಯವರು ಯುವತಿಯನ್ನು ಒತ್ತೆಯಾಳಾಗಿ ಇರಿಸಿಕೊಂಡು ಒಂದು ತಿಂಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಅಯಾನ್ ಪಠಾಣ್ ನನ್ನು ಬಂಧಿಸಿದ್ದಾರೆ.

ಸಂತ್ರಸ್ತೆ ಪ್ರಕಾರ, ಪಠಾಣ್ ಮಂಗಳವಾರ ಭಾರಿ ಹಿಂಸೆ ನೀಡಿದ್ದಾನೆ. ಪ್ಲಾಸ್ಟಿಕ್ ಪೈಪ್ ಮತ್ತು ಬೆಲ್ಟ್‌ ನಿಂದ ಅವಳನ್ನು ಥಳಿಸಿ, ಅವಳ ಕಣ್ಣು ಮತ್ತು ಬಾಯಿಗೆ ಮೆಣಸಿನ ಪುಡಿ ಎರಚಿ ನಂತರ ಅವಳ ಬಾಯಿಗೆ ಫೆವಿಕ್ವಿಕ್ ಅಂಟಿಸಿದ್ದಾನೆ,

ಅಯಾನ್ ಪಠಾಣ್ ತನ್ನ ನೆರೆಯಲ್ಲಿ ವಾಸಿಸುತ್ತಿದ್ದ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ. ಇಬ್ಬರೂ ಸಂಬಂಧ ಹೊಂದಿದ್ದರು. ಪಠಾಣ್‌ ನಿಂದ ದೂರವಿರುವಂತೆ ಮಗಳಿಗೆ ಎಚ್ಚರಿಕೆ ನೀಡಿದ್ದ ಪೋಷಕರು ಶಿವಪುರಿಗೆ ಕರೆದುಕೊಂಡು ಹೋಗಿದ್ದರು ಎಂದು ಆಕೆಯ ತಾಯಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಯುವತಿ ಗುನಾಗೆ ವಾಪಸ್ ಬಂದು ಆರೋಪಿಯೊಂದಿಗೆ ಅವನ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದಳು. ಕೆಲವು ತಿಂಗಳ ನಂತರ, ಪಠಾಣ್ ಯುವತಿಗೆ ಹಿಂಸಿಸಲು ಪ್ರಾರಂಭಿಸಿದ. ಅವಳ ಮನೆಯನ್ನು ತನಗೆ ವರ್ಗಾಯಿಸುವಂತೆ ಹೇಳಿದ್ದು, ಆಕೆ ನಿರಾಕರಿಸಿದಾಗ ಥಳಿಸಿದ್ದ.

ಪಠಾಣ್ ತನ್ನ ಸಂಬಂಧಿಕರ ಸಹಾಯದಿಂದ ಆಕೆಗೆ ಹಲವಾರು ಬಾರಿ ದೈಹಿಕ ಹಿಂಸೆ ನೀಡಿದ್ದಾನೆ. ದೈಹಿಕ ಶೋಷಣೆ ಸುಮಾರು ಒಂದು ತಿಂಗಳ ಕಾಲ ನಡೆಯಿತು. ಮಂಗಳವಾರ ಪಠಾಣ್ ಆಕೆಯ ಮೇಲೆ ಮತ್ತೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಸಹಾಯಕ್ಕಾಗಿ ಆಕೆ ಕೂಗಾಡದಂತೆ ತಡೆಯಲು ಬಾಯಿಗೆ ಮೆಣಸಿನ ಪುಡಿ ತುಂಬಿ ಅಂಟುಗಳಿಂದ ಅವಳ ತುಟಿಗಳನ್ನು ಅಂಟಿಸಿದ್ದಾನೆ

ತೀವ್ರ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಪಠಾಣ್‌ ನನ್ನು ಬಂಧಿಸಿದ್ದಾರೆ. ಯುವತಿಯನ್ನು ಒಂದು ತಿಂಗಳ ಕಾಲ ಪಠಾಣ್ ಒತ್ತೆಯಾಳಾಗಿ ಇರಿಸಿದ್ದ ಕೊಠಡಿಯಿಂದ ಫೆವಿ ಕ್ವಿಕ್, ಬೆಲ್ಟ್ ಮತ್ತು ಪ್ಲಾಸ್ಟಿಕ್ ಪೈಪ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯ ಮನೆಯಿಂದ ಅಕ್ರಮ ಮದ್ಯವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ಅಯಾನ್ ಪಠಾಣ್ ತನ್ನನ್ನು ಮದುವೆಯಾಗುವಂತೆ 23 ವರ್ಷದ ಯುವತಿಯನ್ನು ಒತ್ತಾಯಿಸುತ್ತಿದ್ದ. ಅವನಿಗೆ ಆಕೆಯ ತಾಯಿಯ ಹೆಸರಿನಲ್ಲಿರುವ ಮನೆ ಬೇಕಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ತನಿಖೆಯ ನಂತರ ಹೆಚ್ಚಿನ ಆರೋಪಗಳನ್ನು ದಾಖಲಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular