HomeAutoBREAKING NEWS: ಮಾಜಿ ಸಚಿವ ಮಾಧುಸ್ವಾಮಿ ಕಾರು ಅಪಘಾತ; ಆಟೋ ಚಾಲಕನಿಗೆ ಗಂಭೀರ ಗಾಯ

BREAKING NEWS: ಮಾಜಿ ಸಚಿವ ಮಾಧುಸ್ವಾಮಿ ಕಾರು ಅಪಘಾತ; ಆಟೋ ಚಾಲಕನಿಗೆ ಗಂಭೀರ ಗಾಯ

ಚಿಕ್ಕಮಗಳೂರು: ಮಾಜಿ ಸಚಿವ ಮಾಧುಸ್ವಾಮಿ ಕಾರು ಆಟೋಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿರುವ ಘಟನೆ ಚಿಕ್ಕಮಗಳೂರಿನ ಹೇಮಗಿರಿ ಬಳಿ ನಡೆದಿದೆ.

ಬೀರೂರಿನಲ್ಲಿ ನಡೆಯುತ್ತಿದ್ದ ಸಂಸದ ಪ್ರಜ್ವಲ್ ರೇವಣ್ಣ ಅವರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಮಾಧುಸ್ವಾಮಿ ಕಾರು ಅಪಘಾತವಾಗಿದ್ದು, ಆಟೋಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಆಟೋ ಚಾಲಕನಿಗೆ ಗಾಯಗಳಾಗಿವೆ. ಮಾಜಿ ಸಚಿವರಿಗೆ ಯಾವುದೇ ತೊಂದರೆಯಾಗಿಲ್ಲ.

ಗಾಯಾಳು ಆಟೋ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular