HomeKarnatakaಬೆಂಗಳೂರಲ್ಲಿ ಹುಚ್ಚುನಾಯಿ ದಾಳಿ : ಬಾಲಕರು ಸೇರಿ 7 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

ಬೆಂಗಳೂರಲ್ಲಿ ಹುಚ್ಚುನಾಯಿ ದಾಳಿ : ಬಾಲಕರು ಸೇರಿ 7 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

ಬೆಂಗಳೂರು : ಬೆಂಗಳೂರಲ್ಲಿ ಹುಚ್ಚುನಾಯಿಗಳ ಹಾವಳಿ ಜನರ ನಿದ್ದೆಗೆಡಿಸಿದೆ. ಹುಚ್ಚುನಾಯಿಗಳ ದಾಳಿಗೆ ಬಾಲಕರು ಸೇರಿ 7 ಮಂದಿ ಗಾಯಗೊಂಡಿದ್ದಾರೆ.

ಯಲಹಂಕದ ಕೊಂಡಪ್ಪ ಲೇಔಟ್ ಬಳಿ ರಸ್ತೆಯಲ್ಲಿ ಹೋಗುವವರ ಮೇಲೆ ಹುಚ್ಚುನಾಯಿಯೊಂದು ದಾಳಿ ಮಾಡಿ ಕಚ್ಚುತ್ತಿದ್ದು, ಜನರನ್ನು ಭಯಗೊಳಿಸಿದೆ. ಹುಚ್ಚುನಾಯಿ ಕಚ್ಚಿ ಏಳು ಜನರು ಗಾಯಗೊಂಡಿದ್ದು, ಯಲಹಂಕ ಸರ್ಕಾರಿ ಆಸ್ಪತ್ರೆ ಸೇರಿದ್ದಾರೆ. ಅದರಲ್ಲಿ ಬಾಲಕಿ ಹಾಗೂ ಬಾಲಕಿಗೆ ಗಂಭೀರ ಗಾಯಗಳಾಗಿದೆ.

ಸಂಜೆ ವಾಕಿಂಗ್ ಹೋಗುವವರ ಮೇಲೆ ಹುಚ್ಚುನಾಯಿ ದಾಳಿ ನಡೆಸಿದ್ದು, ಸಿಕ್ಕ ಸಿಕ್ಕ ಕಡೆ ದಾಳಿ ನಡೆಸುತ್ತಿರುವ ಹುಚ್ಚು ನಾಯಿಯನ್ನು ಹಿಡಿಯಲು ಸ್ಥಳೀಯರು ಆಗ್ರಹಿಸಿದ್ದಾರೆ. ಹುಚ್ಚು ನಾಯಿಗಳು ಹೆಚ್ಚಾಗಿ ಮಕ್ಕಳನ್ನೇ ಕಚ್ಚುತ್ತಿದ್ದು, ಸ್ಥಳೀಯರು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular