HomeKarnatakaBIG NEWS: ಪ್ರಧಾನಿ ಮೋದಿ ಇಸ್ರೇಲ್ ಗೆ ಹೋಗಿಬಂದ ಮರುದಿನವೇ ಯುದ್ಧ ಶುರುವಾಗಿದೆ: ಸಚಿವ ಎಂ.ಬಿ.ಪಾಟೀಲ್...

BIG NEWS: ಪ್ರಧಾನಿ ಮೋದಿ ಇಸ್ರೇಲ್ ಗೆ ಹೋಗಿಬಂದ ಮರುದಿನವೇ ಯುದ್ಧ ಶುರುವಾಗಿದೆ: ಸಚಿವ ಎಂ.ಬಿ.ಪಾಟೀಲ್ ಲೇವಡಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಗೆ ಪ್ರವಾಸ ಕೈಗೊಂಡಿದ್ದರು. ಇಸ್ರೇಲ್ ನ್ನು ಫಾದರ್ ಲ್ಯಾಂಡ್ ಎಂದು ಹೊಗಳಿದ್ದರು. ಪ್ರಧಾನಿ ಮೋದಿ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಲೇವಡಿ ಮಾಡಿದ್ದಾರೆ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಪರಿಣಾಮ ರಾಜ್ಯದಲ್ಲಿ ತೈಲದ ಕೊರತೆ ಎದುರಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ತೈಲದ ಅಭಾವದಿಂದಾಗಿ ಕೈಗಾರಿಕೆಗಳಿಗೂ ಕಷ್ಟವಾಗಿದೆ. ಪ್ರಧಾನಿ ಮೋದಿ ಇಸ್ರೇಲ್ ಗೆ ಹೋಗಿದ್ದರು. ಫಾದರ್ ಲ್ಯಾಂಡ್ ಅಂತಾ ಹೊಗಳಿದ್ದರು. ಅವರು ಹೋಗಿ ಬಂದ ಕೂಡಲೇ ಯುದ್ಧ ಶುರುವಾಯ್ತು ಎಂದರು.

ಇರಾನ್ ನವರು ನಮ್ಮ ಹಡಗುಗಳನ್ನು ಬಿಟ್ಟಿದ್ದಾರೆ. ಇಂಡಿಯಾದವರು ನಮ್ಮ ಸ್ನೇಹಿತರು ಎಂದು ಹೇಳಿದ್ದಾರೆ. ನಾವು ಎಡವಿರಬಹುದು. ಆದರೆ ಇರಾನ್ ನವರು ಎಡವಿಲ್ಲ. ಎಲ್ ಪಿಜಿ ಕೊಟ್ಟು ಸಹಕಾರ ಮಾಡಿದ್ದಾರೆ. ಅವರು ಕೊಡದಿದ್ರೆ ಎನಾಗುತ್ತಿತ್ತು? ನಾಅವು ಕೂಡ ಚರಂಡಿಯಲ್ಲಿ ಗ್ಯಾಸ್ ಮಾಡಬೇಕಿತ್ತು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇರಾನ್ ನಮಗೆ ಮಿತ್ರ ರಾಷ್ಟ್ರ. ಇಂದು ನಮಗೆ ಯಾವುದನ್ನೂ ನಿಲ್ಲಿಸಿಲ್ಲ. ಮೋದಿ ಅವರ ವಿದೇಶಾಅಮ್ಗ ನೀತಿ ವಿಫಲವಾಗಿದೆ. ಯಾಕೆಂದರೆ ಮೋದಿಯವರದ್ದೇ ಪ್ರತ್ಯೇಕವಾದ ವಿದೇಶಾಂಗ ನೀತಿ. ಇರಾನ್ ಭಾರತದ ಮಿತ್ರ ರಾಷ್ಟ್ರವಾಗಿದ್ದಕ್ಕೆ ನಮ್ಮ ಹಡಗುಗಳನ್ನು ಮಾತ್ರ ಬಿಡುತ್ತಿದ್ದಾರೆ. ಇಲ್ಲವಾದಲ್ಲಿ ನಮ್ಮ ಗತಿ ಏನಾಗುತ್ತಿತ್ತು? ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular