HomeEntertainment'ಫಾರ್ ರಿಜಿಸ್ಟ್ರೇಷನ್' ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಪೃಥ್ವಿ ಅಂಬಾರ್ ಮತ್ತು ಮಿಲನ ನಾಗರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ಲಿರಿಕಲ್ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಒಂದೇ ಒಂದು ಸಾರಿ’ ಎಂಬ ಈ ಹಾಡು ಹೈರಾ ಉಡುಪಿ ಅವರ ಧ್ವನಿಯಲ್ಲಿ ಮೂಡಿ ಬಂದಿದ್ದು, ಆರ್ ಕೆ ಹರೀಶ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನಾಗಾರ್ಜುನ್ ಶರ್ಮ ಸಾಹಿತ್ಯವಿದೆ.

ನವೀನ್ ದ್ವಾರಕನಾಥ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಮತ್ತು ಮಿಲನ ನಾಗರಾಜ್ ಸೇರಿದಂತೆ ರವಿಶಂಕರ್, ಸುಧಾ ಬೆಳವಾಡಿ, ಸ್ವಾತಿ, ಬಾಬು ಈರಣ್ಣಯ್ಯ, ತಬಲ ನಾಣಿ, ರಮೇಶ್ ಭಟ್, ಸಿಹಿ ಕಹಿ ಚಂದ್ರು, ಅರವಿಂದ್, ಬ್ಯಾಂಕ್ ಜನಾರ್ದನ್ ತೆರೆ ಹಂಚಿಕೊಂಡಿದ್ದಾರೆ. ನಿಶ್ಚಲ್ ಫಿಲಂಸ್ ಲಾಂಛನದಲ್ಲಿ ನವೀನ್ ರಾವ್ ಬಂಡವಾಳ ಹೂಡಿದ್ದು, ಮನು ಸಂಕಲನ, ಅಭಿಲಾಶ್ ಕಲ್ಲತ್ತಿ ಹಾಗೂ ಅಭಿಷೇಕ್ ಕಾಸರಗೋಡು ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular